Ad Widget

ಹವಾಮಾನ ಆಧಾರಿತ ಬೆಳೆ ವಿಮೆ ಸಮಸ್ಯೆ ಶೀಘ್ರ ಸರಿಪಡಿಸಲು ಸಹಕಾರಿ ಯೂನಿಯನ್ ಆಗ್ರಹ

ವರದಿ: ಮಿಥುನ್ ಕರ್ಲಪ್ಪಾಡಿ

ಸುಳ್ಯ: ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಕೂಡಾ ಸಹಕಾರಿ ಸಂಘಗಳಿಗೆ ರೈತರ ವಿಮೆ ಪ್ರೀಮಿಯಂ ಪಾವತಿಯ ಬಗ್ಗೆ ಯಾವುದೇ ಆದೇಶಗಳು ಬಂದಿರುವುದಿಲ್ಲ ಇದರಿಂದಾಗಿ ಕೃಷಿಕರಿಗೆ ಸಮಸ್ಯೆಗಳು ಎದುರಾಗುತ್ತಿದ್ದು ಆದಷ್ಟು ಬೇಗ ಕೃಷಿಕರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ವಿಮೆ ಕುರಿತು ಸರಕಾರ ಕ್ರಮವಹಿಸಬೇಕು ಎಂದು ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ, ಮರ್ಕಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ದೇಲಂಪಾಡಿ ಅವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರತಿ ವರ್ಷವೂ ಜೂ.30ರೊಳಗೆ ಪ್ರೀಮಿಯಂ ಪಾವತಿಯಾಗುತ್ತಿದ್ದು, ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಕೂಡಾ ಸಹಕಾರಿ ಸಂಘಕ್ಕೆ ಪ್ರೀಮಿಯಂ ಪಾವತಿಗೆ ಯಾವುದೇ ಆದೇಶಗಳು ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬೆಳೆ ವಿಮೆಯ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆಗಳ ಕುರಿತಾಗಿ ವರದಿಗಳು ಬರುತ್ತಿದ್ದರೂ ಸೊಸೈಟಿಗಳಿಗೆ ಈ ಬಗ್ಗೆ ಯಾವುದೇ ಆದೇಶಗಳು ಬಂದಿಲ್ಲ. ಕೃಷಿಕರು ಸೊಸೈಟಿಗೆ ಬಂದು ವಿಮೆಯ ಬಗ್ಗೆ ಕೇಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆ ವಿಮೆ ಪಾವತಿದಾರರು ಹೆಚ್ಚಾಗುತ್ತಿದ್ದಾರೆ. ಬೆಳೆವಿಮೆ ರೈತರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಈ ಬಾರಿ ಬೆಳೆ ವಿಮೆ ಪಾವತಿಯೇ ಆಗದಿರುವುದರಿಂದ ಕೃಷಿಕರು ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ವಿಳೆವಿಮೆ ಪಾವತಿಗೆ ಸಹಕಾರಿ ಸಂಘಗಳಿಗೆ ತಕ್ಷಣ ಆದೇಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಹಕಾರಿ ಯೂನಿಯನ್ ಅಧ್ಯಕ್ಷರಾದ ರಮೇಶ್ ದೇಲಂಪಾಡಿ, ರೈತರಿಗೆ ಹವಾಮಾನಾಧರಿತ ವಿಮೆ ಸಮಸ್ಯೆ ಹಾಗೂ ಗೊಂದಲಗಳು ಉಂಟಾಗುತ್ತಿವೆ. ಜೂನ್ 1 ರಿಂದ ಪ್ರೀಮಿಯಂ ಕಲೆಕ್ಷನ್ ಜೂನ್ 30 ರೊಳಗೆ ಆಗುತ್ತಿತ್ತು. ಆದರೆ ಈ ಬಾರಿ ಕೃಷಿಕರಿಗೆ ಸರಕಾರದಿಂದ ಇನ್ಸೂರೆನ್ಸ್ ಸಹಕಾರಿ ಸಂಘಗಳಿಗೆ ವಿಮೆ ಪಾವತಿ ತಡವಾಗುತ್ತಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ರೈತರ ಹವಾಮಾನಾಧರಿತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕರಾದ ವಿಷ್ಣು ಭಟ್, ದಯಾನಂದ ಕುರುಂಜಿ , ಶಾರದಾ ಡಿ .ಶೆಟ್ಟಿ, ಯೂನಿಯನ್ ಸೆಕ್ರಟರಿ ವಾಸುದೇವ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!