Ad Widget

ಪೆರಾಜೆ ಸೊಸೈಟಿ ಚುನಾವಣೆ : ಎಲ್ಲಾ ಸ್ಥಾನಗಳನ್ನು ಗೆದ್ದು ಬೀಗಿದ ಬಿಜೆಪಿ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಜೂ.25ರಂದು ಚುನಾವಣೆ ನಡೆದಿದ್ದು, ಒಟ್ಟು 13 ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 26 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 791 ಮತಗಳಿದ್ದು ಅದರಲ್ಲಿ 751 ಮತಗಳು
ಚಲಾವಣೆಯಾಗಿದ್ದವು. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು
376 ಮತಗಳಿದ್ದು, 313 ಮತಗಳು ಚಲಾವಣೆಯಾಗಿತ್ತು.

ಸಾಮಾನ್ಯ ಸಾಲಗಾರರ ಕೇತ್ರದಿಂದ ಒಟ್ಟು 6 ಮಂದಿ ನಿರ್ದೇಶಕರುಗಳ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ನಾಗೇಶ್
ಕುಂದಲ್ಪಾಡಿ 534, ಜಯರಾಮ ನಿಡ್ಯಮಲೆ 402, ಧನಂಜಯ ಕೋಡಿ 346, ಹೊನ್ನಪ್ಪ ಅಮೆಚೂರು 453,ಸೀತಾರಾಮ ಕದಿಕಡ್ಕ 388, ಅಶೋಕ ಪೆರುಮುಂಡ 478 ಮತಗಳನ್ನು ಪಡೆದು ವಿಜಯಗಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಪೆರುಮುಂಡ 308, ದಯಾನಂದ ಪೆರುಮುಂಡ 310, ಗೌತಮ್ ಎಂ.ಎಸ್. 170, ಚಿದಾನಂದ ಪೀಚೆ 284, ಜನಾರ್ದನ ನಾಯ್ಕ ನಿಡ್ಯಮಲೆ 168, ಉಮೇಶ್
ಕುಂಬಳಚೇರಿ 210, ಮತಗಳನ್ನು ಪಡೆದು ಪರಾಭವಗೊಂಡರು.

ಪರಿಶಿಷ್ಟ ಜಾತಿ ಕ್ಷೇತ್ರದಿಂದ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ಪಿ.ಟಿ 461 ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಪಿ.ಪಿ. 246 ಮತಗಳನ್ನು ಪಡೆದು ಪರಾಭವಗೊಂಡರು.


ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೇಷಪ್ಪ ಎನ್.ವಿ. 525 ಮತ ಪಡೆದು ಗೆಲುವು ಕಂಡರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀಧರ ನಾಯ್ಕ ಕೆ.ಸಿ. 181 ಮತಗಳನ್ನು ಪಡೆದು ಪರಾಭವಗೊಂಡರು.


ಮಹಿಳಾ ಕ್ಷೇತ್ರದ 2 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪುಷ್ಪಾವತಿ ವೈ.ಜೆ. 415 ಮತ್ತು ಪ್ರಮೀಳ ಎನ್. 457 ಮತ ಪಡೆದು ಆಯ್ಕೆಗೊಂಡರು. ಇದೇ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರೋಹಿಣಿ 192, ಶೀಲಾ ಎನ್ ಸಿ 316 ಮತ ಪಡೆದು ಪರಾಭವಗೊಂಡರು.

ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರದೀಪ್ ಕೆ.ಎಂ. 537ಮತ ಗಳಿಸಿ ಗೆಲುವು ಕಂಡರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬೂಬಕ್ಕರ್ ಪಿ.ಎಂ.
182 ಮತಗಳನ್ನು ಪಡೆದು ಸೋಲು ಕಂಡರು.
ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೀನರಾಜ್ ಡಿ.ಸಿ. 470
ಮತ ಪಡೆದು ಗೆಲುವು ಕಂಡರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರಿಪ್ರಸಾದ್ ಪಿ.ಬಿ. 256 ಮತಗಳನ್ನು ಪಡೆದು ಪರಾಭವಗೊಂಡರು.
ಸಾಲರಹಿತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ
ಅಭ್ಯರ್ಥಿ ಕಿರಣ್ ಬಿ.ಎಲ್. 190
ಮತ ಪಡೆದು ಗೆಲುವು ಕಂಡರು. ಕಾಂಗ್ರೆಸ್ ಬೆಂಬಲಿತ
ಅಭ್ಯರ್ಥಿ ನೇಮಿರಾಜ ಪಿ.ಎಚ್. 122
ಮತ ಪಡೆದು ಪರಾಭವಗೊಂಡರು.

13 ಕ್ಕೆ 13 ಸ್ಥಾನ ಗೆಲ್ಲುವುದರೊಂದಿಗೆ ಸಹಕಾರಿ ಸಂಘದ ಅಧಿಕಾರದ ಚುಕ್ಕಾಣಿ ಬಿಜೆಪಿ ಬೆಂಬಲಿತರ ಪಾಲಾಗಿದೆ. ಅಧಿಕಾರ ಪಡೆಯುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!