ಸಾವಿರಾರು ಜನರ ನೋವು ನಿವಾರಿಸಿದ ನಾಟಿವೈಧ್ಯ ಶ್ರೀನಿವಾಸ್ ಪಂಡಿತ್

. . . . . . . . .

‘ಕೋಟಿವಿಧ್ಯೆಗಿಂತ, ನಾಟಿವಿಧ್ಯೆ ಮೇಲು’ ಎಂಬ ಮಾತಿನಂತೆ ಇಲ್ಲೊಬ್ಬರು ತನಗೆ ವಂಶಪಾರಂಪರ್ಯವಾಗಿ ಸಿದ್ಧಿಸಿದ ನಾಟಿವಿದ್ಯೆಯ ಜ್ಞಾನವನ್ನು ಬಳಸಿ ಆಸ್ಪತ್ರೆಯಲ್ಲಿ ವೈದ್ಯರಿಂದಲೇ ಗುಣಪಡಿಸಲಾಗಂತಹ ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಹಲವು ಜನರಿಗೆ ನೆರವಾದಂತಹ ತೆರೆಮರೆಯ ‘ನಾಟಿವೈದ್ಯ’ ರೊಬ್ಬರು ನಮ್ಮ ನಡುವೆ ಇದ್ದಾರೆ.
ನೋಡಲು ಸರಳ ವ್ಯಕ್ತಿಯಾಗಿ ಕಂಡರೂ ಇವರ ಕಾರ್ಯ ಮಾತ್ರ ನೂರಾರು ಜನರಿಗೆ ನೆರವಾಗುವಂತಹವು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಏನೇಕಲ್ಲು ಎಂಬ ಊರಿನಲ್ಲಿ ಪುಟ್ಟದಾದ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದು ಅಲ್ಲೇ ತನ್ನ ಬಳಿ ಚಿಕಿತ್ಸೆಗಾಗಿ ಬರುವ ಜನರಿಗೆ ಮದ್ದು ನೀಡುತ್ತಿರುವ ಇವರ ಹೆಸರು ಶ್ರೀನಿವಾಸ ಪಂಡಿತ್ ಎಂಬುದಾಗಿ. ಸದ್ಯ ಇವರು ‘ನಾಟಿವೈದ್ಯ ಪಂಡಿತರೆಂದೇ’ ಚಿರಪರಿಚಿತರು.
ಮೂಲತಃ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕೊಡ್ಲಮೊಗರು ಗ್ರಾಮದ ಮುಗುಳಿ ನಿವಾಸಿ ಪ್ರಸಿದ್ಧ ನಾಟಿವೈದ್ಯ ಪಂಡಿತರಾದ ದಿ. ಮಾಯನಪ್ಪು ಬೆಳ್ಚಡ, ಹಾಗೂ ಶಾರದಾ ದಂಪತಿಗಳ ಮಗನಾದ ಶ್ರೀನಿವಾಸರು ತನ್ನ ಅಜ್ಜ ಹಾಗೂ ತಂದೆಯಿಂದ ವಂಶಪಾರಂಪರ್ಯವಾಗಿ ಒಲಿದ ನಾಟಿವಿದ್ಯೆಯ ಪಾಂಡಿತ್ಯದಿಂದ ಪಕ್ಷಪಾತ(ಪಾರ್ಶ್ವವಾಯು),ಗಂಟನೋವು, ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಸರ್ಪಸುತ್ತು, ಕೆಂಪು, ಕಿರಾಣಿ, ಮೂತ್ರಕೋಶದ ಕಲ್ಲು, ತಲೆಹೊಟ್ಟು, ಚರ್ಮರೋಗ, ಅರಶಿನ ಕಾಮಾಲೆ, ಮತ್ತು ಮಹಿಳೆಯರಲ್ಲಿ ಕಂಡುಬರುವ ಬಿಳಿಸೆರಗು, ತಿಂಗಳಮುಟ್ಟಿನ ಸಮಸ್ಯೆ, ಹಾಗೂ ಬಂಜೆತನ, ಅಲ್ಲದೇ ವಿಷಪೂರಿತ ಜೇಡಕಡಿತದಂತಹ ಗಂಭೀರ ಸಮಸ್ಯೆಗಳಿಗೂ ಪರಿಣಾಮಕಾರಿಯಾದ ಔಷಧಿ ನೀಡುತ್ತಿದ್ದಾರೆ.
ಪ್ರಕೃತಿಯಲ್ಲಿ ದೊರೆಯುವ ಮರಗಿಡಗಳ ಹಾಗೂ ಮೂಲಿಕೆಗಳ ಎಲೆ, ಬೇರು, ತೊಗಟೆ, ಹಾಗೂ ನವಧಾನ್ಯಗಳನ್ನು ಉಪಯೋಗಿಸಿಕೊಂಡು ಅದರಿಂದ ತಾವೇ ಸ್ವತಃವಾಗಿ ಎಣ್ಣೆ, ಕಷಾಯ, ಲೇಹ್ಯ ತಯಾರಿಸಿ, ಚಿಕಿತ್ಸೆಗಾಗಿ ಬಂದವರ ನಾಡಿ ಪರೀಕ್ಷಿಸಿ ಕಾಯಿಲೆಯ ಸ್ವರೂಪವನ್ನು ತಿಳಿದುಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.
ಕಳೆದ ಒಂಬತ್ತು ವರ್ಷಗಳಿಂದ ಏನೇಕಲ್ಲಿನಲ್ಲಿ ನೆಲೆಸಿರುವ ಇವರು ತನ್ನ 14 ನೇ ವಯಸ್ಸಿನಲ್ಲಿಯೇ ನಾಟಿಮದ್ದು ಕೊಡಲು ಪ್ರಾರಂಭಿಸಿದ್ದಾರೆ. ಇದುವರೆಗೆ ಸರಿ ಸುಮಾರು 10.000 ಕ್ಕಿಂತಲೂ ಹೆಚ್ಚು ಜನರಿಗೆ ನಾಟಿವೈದ್ಯ ಪದ್ಧತಿಯಲ್ಲಿ ಔಷಧಿ ನೀಡಿ ಕಾಯಿಲೆಗಳನ್ನು ಗುಣಪಡಿಸಿರುವ ಇವರು, ಪ್ರಾಚೀನ ಕಾಲದ ಈ ನಾಟಿವೈದ್ಯ ಪದ್ಧತಿಯು ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಉದ್ದೇಶದಿಂದ ನಾಟಿವಿದ್ಯೆಯಲ್ಲಿ ಆಸಕ್ತಿ ಹೊಂದಿರುವವರಿಗೆ ತನ್ನ ಮೂಲಕ ನಾಟಿವೈದ್ಯ ಪದ್ಧತಿಯನ್ನು ಕಲಿಸುವ ಇರಾದೆಯನ್ನು ಹೊಂದಿದ್ದಾರೆ. ತನ್ನ ಬಳಿ ಚಿಕಿತ್ಸೆಗಾಗಿ ಬರುವವರಿಗೆ ಯಾವುದೇ ಸಮಯದಲ್ಲೂ ಲಭ್ಯರಿರುವ ಇವರು ಮಕ್ಕಳ ಆರೋಗ್ಯ ಕುರಿತು ಮಾಹಿತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿಯೂ ಹಲವು ಕಡೆ ಮಾಹಿತಿಗಳನ್ನು ನೀಡಿರುತ್ತಾರೆ. ತನ್ನ ಈ ಸಮಾಜಮುಖಿ ಕಾರ್ಯಕ್ಕೆ ಸನ್ಮಾನ ಬಯಸದ ಸರಳ ವ್ಯಕ್ತಿ ಇವರು. ಅಲ್ಲದೇ ತನ್ನ ಈ ಕಾರ್ಯಕ್ಕೆ ಏನೇಕಲ್ಲು ಎಂಬ ಈ ಪುಟ್ಟ ಊರಿನವರ ಸಂಪೂರ್ಣ ಸಹಕಾರ, ಸಹಾಯ ಇದೆ ಎನ್ನುತ್ತಾರೆ.

. . . . . . .

ಇವರ ಸಂಪರ್ಕ ವಿಳಾಸ:
ಶ್ರೀ ನಿವಾಸ್ ಪಂಡಿತ್ , ಶ್ರೀ ಕನಿಲ ನಾಟಿ ವೈದ್ಯರು, ಏನೇಕಲ್ಲು, ಮೊಬೈಲ್: 9148719183

(ಬರಹ : ಚಂದ್ರಶೇಖರ ಕೊಡಿಯಾಲ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading