ಸ.ಉ.ಹಿ.ಪ್ರಾಥಮಿಕ ಶಾಲೆ ಜಯನಗರ ಇಲ್ಲಿ ಡಿ.17ನೇ ಶನಿವಾರದಂದು ಶಾಲಾ ವಾರ್ಷಿಕೋತ್ಸವನ್ನು ನಡೆಸಲಾಯಿತು. ಸಮಾರಂಭದ ಉದ್ಘಾಟನೆಯನ್ನು ಮೀನುಗಾರಿಕಾ ನಿಗಮದ ಮಾನ್ಯ ಅಧ್ಯಕ್ಷರಾದ ಶ್ರೀ ಎ.ವಿ ತೀರ್ಥರಾಮ ಇವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಕಂದಡ್ಕ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಶ್ರೀಮತಿ ಶೀತಲ್ ಯು. ಕೆ K. E. S ಮಾನ್ಯ ಸಮನ್ವಯಾಧಿಕಾರಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಶ್ರೀಮತಿ ಮಮತಾ ಕೆ ಸಮೂಹ ಸಂಪನ್ಮೂಲ ವ್ಯಕ್ತಿ ಸುಳ್ಯ, ರೋಹಿತ್ ಕೊಯಿಂಗೋಡಿ ನಾಮನಿರ್ದೇಶನ ಸದಸ್ಯರು ನಗರ ಪಂಚಾಯತ್ ಸುಳ್ಯ, ಶ್ರೀಮತಿ ಶಿಲ್ಪಾ ಸುದೇವ್ ನಗರ ಪಂಚಾಯತ್ ಸದಸ್ಯರು ಸುಳ್ಯ ಇವರುಗಳು ಉಪಸ್ಥಿತರಿದ್ದರು. ಶ್ರೀ ಪುರುಷೋತ್ತಮ ಕಿರ್ಲಾಯ ನಿವೃತ್ತ ಮುಖ್ಯ ಶಿಕ್ಷಕರು, ಅನುದಾನಿತ ಪ್ರೌಢಶಾಲೆ ಪೆರಾಜೆ ಇವರು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಾರ್ಷಿಕೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಬಾಲಕೃಷ್ಣ ಭಟ್ ಕೊಡೆಂಕಿರಿ, ನಗರ ಪಂಚಾಯತ್ ಸದಸ್ಯರು, ಜಯನಗರ ವಾರ್ಡ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಲಾವಣ್ಯ ಬಿ, ಉಪಾಧ್ಯಕ್ಷರಾದ ಮುದ್ದಪ್ಪ ನಾರಾಜೆ, ಮುಖ್ಯೋಪಾಧ್ಯಾಯರಾದ ಶ್ರೀಮತಿ ವೀಣಾ ಕೆ, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾದ ರಂಜಿತ್ ಜಯನಗರ, ಮಾಧವ ಟೈಲರ್ ಜಯನಗರ, ಸುದೇವ್ ಜಯನಗರ, ನಳಿನಿ ಭಟ್, ಜಾಹಿರ್ ಜಯನಗರ, ಪ್ರಶಾಂತ್ ಕುದ್ಪಾಜೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಶಾಲಾ ವರದಿ ವಾಚನ, ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ, ದತ್ತಿನಿಧಿ ವಿತರಣೆ, ತರಗತಿವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ತೀರ್ಥರಾಮ ಎ.ವಿ.ಇವರನ್ನು ಸನ್ಮಾನಿಸಲಾಯಿತು. ಪ್ರಾರ್ಥನೆಯನ್ನು ಶಾಲಾ ಶಿಕ್ಷಕಿ ಮತ್ತು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಶಿಕ್ಷಕರಾದ ತೀರ್ಥರಾಮ ಎ.ವಿ. ಅವರು ಸ್ವಾಗತಿಸಿ, ಸಂಚಾಲಕರಾದ ಶ್ರೀ ಬಾಲಕೃಷ್ಣ ಭಟ್ ಕೊಡೆಂಕಿರಿ ಧನ್ಯವಾದ ಸಲ್ಲಿಸಿದರು. ಶಾಲಾ ಶಿಕ್ಷಕರು ಸಭಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಅಂಗನವಾಡಿ ಪುಟಾಣಿಗಳಿಂದ, ಶಾಲಾ ವಿದ್ಯಾರ್ಥಿಗಳಿಂದ, ಸ್ಥಳೀಯ ಸಂಘ ಸಂಸ್ಥೆಗಳಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆದವು. ಶಾಲಾ ವಿದ್ಯಾರ್ಥಿಗಳಾದ ಮಹಮ್ಮದ್ ನಾಸೂಕ್ ಮತ್ತು ತುಷಾರ್ ಟಿ ಎನ್.ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಿಸಿದರು.