- Saturday
- November 23rd, 2024
ನವರಾತ್ರಿ ಮತ್ತು ವಿಜಯದಶಮಿ ಪ್ರಯುಕ್ತ ಅಕ್ಟೋಬರ್ 04ರಂದು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಾಗೂ ಕೆವಿಜಿ ಆಯುರ್ವೇದ ಫಾರ್ಮ ಮತ್ತು ರಿಸರ್ಚ್ ಸೆಂಟರ್ ನಲ್ಲಿ ಆಯುಧ ಪೂಜೆ ಆಚರಣೆ ಮಾಡಲಾಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದಡಾ. ಕೆ. ವಿ. ಚಿದಾನಂದ, ಶ್ರೀ. ಹೇಮನಾಥ ಕೆ. ವಿ., ಕೆ.ವಿ.ಜಿ.ಆಯುರ್ವೇದ...
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ದಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ದೇವಳದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು ಹಾಗೂ ತಕ್ಕಮುಖ್ಯಸ್ಥರು, ಮಾಜಿ ಮೊಕ್ತೇಸರರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಎಲಿಮಲೆಯ ಸಮೀಪದ ಜಬಳೆ ಬಳಿ ಮಾರುತಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಅಣ್ಣ ಮತ್ತು ತಂಗಿ ಇಬ್ಬರೂ ಮೃತಪಟ್ಟ ಹೃದಯವಿದ್ರಾಹಕ ಘಟನೆ ಇಂದು ವರದಿಯಾಗಿದೆ. ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಎಲಿಮಲೆಗೆ ಆಯುಧಪೂಜೆಗೆ ಹೋಗಿದ್ದ ನಿಶಾಂತ್ ತನ್ನ ತಂಗಿ ಮೋಕ್ಷಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ...
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.04ರಂದು ನಡೆಯಿತು. ಪ್ರಶಾಂತ್ ಕಿಲಂಗೋಡಿ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಹಾಗೂ ರಮೇಶ್ ಮಠತ್ತಡ್ಕ, ಸಿಬ್ಬಂದಿಗಳಾದ ಮಧುಸೂದನ್, ಅಲೆಕ್ಸ್ ಡಿ'ಸೋಜ, ಪ್ರವೀಣ್, ರಮೇಶ್ ಹಾಗೂ ಚಂದ್ರಶೇಖರ ತಂಟೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಎಲಿಮಲೆಯ ಸಮೀಪದ ಜಬಳೆ ಬಳಿ ಮಾರುತಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಅಣ್ಣ ಮೃತಪಟ್ಟು ತಂಗಿ ಗಂಭೀರ ಗಾಯಗೊಂಡ ಘಟನೆ ಇಂದು ವರದಿಯಾಗಿದೆ.ಮೃತಪಟ್ಟ ಯುವಕ ನಿಶಾಂತ್ ಬಾಜಿನಡ್ಕ ಎಂದು ತಿಳಿದು ಬಂದಿದೆ. ನಿಶಾಂತ್ ತಂಗಿಯನ್ನು ಕರೆದುಕೊಂಡು ಎಲಿಮಲೆಯಿಂದ ಮನೆಗೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ರಸ್ತೆಗೆ...
ಪಂಜ ಲಯನ್ಸ್ ಕ್ಲಬ್ ವತಿಯಿಂದ ಅ.2ರಂದು ಪಾಂಡಿಗದ್ದೆ ದ.ಕ ಜಿ. ಪ.ಸ.ಕಿ. ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ ಅಂಗವಾಗಿ ದತ್ತು ನಿಧಿ ಸ್ಥಾಪನೆ ಮತ್ತು ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಂಡಿಗದ್ದೆ ಎಸ್.ಡಿ ಎಂ. ಸಿ ಅಧ್ಯಕ್ಷ ವಾಚಣ್ಣ...
ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಆಯುಧ ಪೂಜೆ ನಡೆಯಿತು. ಪೂಜೆ ವಿಧಿ ವಿಧಾನ ಅರ್ಚಕ ಅಜಿತ್ ಭಟ್ ರವರ ನೇತೃತ್ವದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್,ಹಾಗೂ ಕಚೇರಿಯ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು, ಮತ್ತು ಸಿಬ್ಬಂದಿಗಳ ಕುಟುಂಬದವರು, ಸ್ಥಳೀಯರು ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೆರ್ಯ ಇದರ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.4 ರಿಂದ ಅ.5 ರವರೆಗೆ ಬಾಳಿಲ ವಿದ್ಯಾಬೋಧಿನೀ ಹಿ ಪ್ರಾ, ಶಾಲಾ ವಠಾರದಲ್ಲಿ ಜರಗಲಿದೆ. ಅ. 4 ರ ಬೆಳಿಗ್ಗೆ ಶಾರದಾ ದೇವಿಯ ವಿಗ್ರಹ ಆಗಮನ, ಶಾರದಾದೇವಿಯ ಪ್ರತಿಷ್ಠೆ, ಕಿರೀಟಧಾರಣೆ, ಶಾರದಾದೇವಿಗೆ ಚಿನ್ನದ ಕಾರಿಮಣಿ ಹಾಗೂ ತಾಳಿ ಸಮರ್ಪಣೆ...
ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನಲ್ಲಿ ಅ.2 ರಂದು ಶಿಕ್ಷಕ ರಕ್ಷಕ ಸಂಘದ ವತಿಯಿಂದ 52ನೇ ವರ್ಷ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ ನಡೆಯಿತು. ಪೂಜಾ ವಿಧಾನ ಪೂರೈಸಿ ಮಧ್ಯಾಹ್ನ ಮಹಾ ಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು.ಈ ಸಂದರ್ಭದಲ್ಲಿ ಕಲಾವಿದ ಗಣೇಶ್ ಪರ್ವತಮುಖಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ಕಲಾವಿದ...
Loading posts...
All posts loaded
No more posts