- Sunday
- November 24th, 2024
ಗುತ್ತಿಗಾರು ಹರಿಹರಪಲ್ಲತ್ತಡ್ಕ ಮಧ್ಯೆ ಅ.5 ರಂದು ಅಮೂಲ್ಯ ದಾಖಲೆಗಳಿದ್ದ ಪರ್ಸೊಂದು ಕಳೆದುಹೋಗಿವೆ. ಸಿಕ್ಕಿದವರು ದಯ ವಿಟ್ಟು ಈ ನಂಬರ್ ಗೆ ( 9353548576) ತಿಳಿಸಬೇಕಾಗಿ ವಿನಂತಿಸಿದ್ದಾರೆ.
ಕಲ್ಮಕಾರು ಗ್ರಾಮದ ಚನಿಯಪ್ಪ ನಾಯ್ಕ ಪನ್ನೆ ಅವರು ಅಕ್ಟೋಬರ್ 06 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಕುಟುಂಬಸ್ಥರು ಹಾಗೂ ಬಂಧು ಮಿತ್ರರುಗಳನ್ನು ಅಗಲಿದ್ದಾರೆ.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧೀನಲ್ಲಿರುವ ಹಾಸನದ ಮತ್ಸ್ಯ ದರ್ಶನಿಗೆ ಕೆ.ಎಫ್.ಡಿ.ಸಿ. ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ ರವರು ಹಠತ್ತಾಗಿ ಭೇಟಿದರು. ಕಛೇರಿಯ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದರು.
ಐನೆಕಿದು ಗ್ರಾಮದ ಕೊಪ್ಪಳಗದ್ದೆ ಸೇತುವೆಯ ಕೆಳಗೆ ದನದ ತಲೆ ಹಾಗೂ ತ್ಯಾಜ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದನದ ಹತ್ಯೆ ಮಾಡಿದವರು ಹಾಗೂ ಸ್ಥಳಿಯವಾಗಿ ಸಹಕರಿಸಿದವರು ಸಿಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅ.04 ರಂದು ಶ್ರೀ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಮಹಿಳೆಯೋರ್ವರ ಕಿವಿಯ ಬೆಂಡೋಲೆ ಬಿದ್ದು ಹೋಗಿತ್ತು. ಇದು ಉಬರಡ್ಕ ಗ್ರಾಮದ ರಾಧಾಕೃಷ್ಣ ಬೈತಡ್ಕ ಹಾಗೂ ಹವ್ಯಾ ಬೈತಡ್ಕ ರವರ ಮಗಳಾದ ಜನಿತಾಳಿಗೆ ಸಿಕ್ಕಿತ್ತು. ಕೂಡಲೇ ಅದನ್ನು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಪ್ರಾಮಾಣಿಕತೆ ಮೆರೆದ ಆಕೆಗೆ ವ್ಯವಸ್ಥಾಪನಾ ಸಮಿತಿ ವತಿಯಿಂದ ಭಗವದ್ಗೀತೆ ಪುಸ್ತಕ ನೀಡಿ ಗೌರವಿಸಲಾಯಿತು.
ಕಲ್ಲಪ್ಪಳ್ಳಿ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಮಹಾಸಭೆಯು ಕ್ಲಬ್ ನ ಕಚೇರಿಯಲ್ಲಿ ಎನ್. ನಿರಂಜನ ಮಾಸ್ತರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. Nithin MS ಕಾರ್ಯದರ್ಶಿ ಗುಡ್ಡಪ್ಪ ವರದಿ ವಾಚಿಸಿದರು. ಲೆಕ್ಕಪತ್ರ ಅಂಗೀಕಾರವಾದ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್ ಗರುಗುಂಜ, ಕಾರ್ಯದರ್ಶಿಗಳಾಗಿ ವಸಂತ ಯಂ.ಯಂ., ಖಜಾಂಚಿಯಾಗಿ ನಿತಿನ್ ಯಂ.ಎಸ್., ಉಪಾಧ್ಯಕ್ಷರಾಗಿ ಪ್ರದೀಪ್...
ಅಜ್ಜಾವರ ಗ್ರಾಮದ ಮಾವಿನಪಳ್ಳ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ವಿಜಯದಶಮಿಯಂದು ಶ್ರೀ ದೇವಿಗೆ ವಿಶೇಷ ಮಹಾಪೂಜೆ ನೈವೇದ್ಯ ಸಮರ್ಪಣೆ ಹಾಗೂ ಮಕ್ಕಳಿಗೆಅನ್ನಪ್ರಾಶನ ಹಾಗೂ ಮಹಾ ಅನ್ನದಾನ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟ ಹತ್ತು ಸಮಸ್ತರು ಹಾಗೂ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ, ಮಹಮ್ಮಾಯಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರಾದ...
ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಿವಿಲ್ ಪೊಲೀಸ್ /ರಿಸರ್ವ್ ಪೊಲೀಸ್ ಮತ್ತು ಪಿ.ಯಸ್.ಐ ನೇಮಕಾತಿಯ ಲಿಖಿತ ಪರೀಕ್ಷೆಯ ಮಾಹಿತಿ ಕಾರ್ಯಾಗಾರ ಅ.7 ರಂದು ಶನಿವಾರ ಬೆಳಿಗ್ಗೆ 9.00 ಕ್ಕೆಪಂಚಾಯತ್ ಬಳಿಯ ಪ. ವರ್ಗದ ಸಭಾ ಭವನದಲ್ಲಿ ನಡೆಯಲಿದೆ. ಬೆಂಗಳೂರು ನಗರ ಠಾಣೆಯ ಪಿ.ಎಸ್.ಐ. ಪ್ರದೀಪ್ ಗೌಡ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ...
ಸುಳ್ಯದ ಲಾಲ್ ಬಹದ್ದೂರ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘದಿಂದ ಸರಕಾರಿ ಆಸ್ಪತ್ರೆಯಲ್ಲಿಯ ರೋಗಿಗಳಿಗೆ ಹಣ್ಣು ವಿತರಣಾ ಕಾರ್ಯಕ್ರಮ ಕಾರ್ಯಕ್ರಮವು ಅಕ್ಟೊಬರ್ 2 ರಂದು ನಡೆಯಿತು . ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮತ್ತು ಮಹಾತ್ಮಾ ಗಾಂಧೀಜಿ ಅವರ ಜಯಂತಿ ಇದ್ದ ಪ್ರಯುಕ್ತ ಸಂಘಟನೆಯು ರೋಗಿಗಳು ಬೇಗ ಗುಣಮುಖರಾಗಿ ಆರೋಗ್ಯ ಏಳಿಗೆ ಕಂಡು ಸುಂದರ ಬಾಳು...
ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ 35ನೇ ವರ್ಷದ ಶ್ರೀ ಶಾರದೋತ್ಸವವು ಅ.05 ರಂದು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ನಡೆಯಿತು. ಬೆಳಿಗ್ಗೆ ಶಾರದಾ ಪ್ರತಿಷ್ಠೆ ಪೂಜೆ ನಡೆಯಿತು. ನಂತರ ವಿದ್ಯಾರಂಭ (ಅಕ್ಷರಾಭ್ಯಾಸ) ಶಾರದಾ ಸಹಸ್ರ ನಾಮಾರ್ಚನೆ, ಅಷ್ಟೋತ್ತರನಾಮಾರ್ಚನೆ, ಆಯುಧ ಪೂಜೆ, ಇತ್ಯಾದಿ ಸೇವೆಗಳು ನಡೆದವು. ಶಾರದೋತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ,...
Loading posts...
All posts loaded
No more posts