Ad Widget

ರೋಟರಿ ಪದವಿಪೂರ್ವ ಕಾಲೇಜು ಮಿತ್ತಡ್ಕ ಇದರ ಯುವ ರೆಡ್ ಕ್ರಾಸ್ ಸಂಸ್ಥೆಯ ಪ್ರಾರಂಭೋತ್ಸವ

ಸುಳ್ಯದ ಪ್ರತಿಷ್ಠಿತ ರೋಟರಿ ಪದವಿಪೂರ್ವ ಕಾಲೇಜು ಮಿತ್ತಡ್ಕ ಇದರ ಯುವ ರೆಡ್ ಕ್ರಾಸ್ ಸಂಸ್ಥೆಯ ಪ್ರಾರಂಭೋತ್ಸವವು ದಿನಾಂಕ 29/10/2022ನೇ ಶನಿವಾರ ನಡೆಯಿತು.
ಸಂಸ್ಥೆಯ ಸಂಚಾಲಕರಾದ ರೊಟೇರಿಯನ್ ಶ್ರೀ ಗಿರಿಜಾ ಶಂಕರ್ ತುದಿಯಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಳ್ಯದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಶ್ರೀಯುತ ಪಿ ಬಿ ಸುಧಾಕರ ರೈ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕ ಇದರ ಜಿಲ್ಲಾ ಪ್ರತಿನಿಧಿಯಾದ ಶ್ರೀಯುತ ಸಿ ಎ ಗಣೇಶ್ ಭಟ್ ರವರು ಉಪಸ್ಥಿತರಿದ್ದು ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

. . . . . . . . .

ರೊಟೇರಿಯನ್ ಶ್ರೀಮತಿ ಮೀನಾಕ್ಷಿ ಕೊಂರ್ಬಡ್ಕ, ರೊಟೇರಿಯನ್ ಶ್ರೀ ದಯಾನಂದ ಆಳ್ವ ,ರೋಟರಿ ಪಿ ಯು ಕಾಲೇಜು ಇದರ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ , ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ,ಸಂಸ್ಥೆಯ ಉಪನ್ಯಾಸಕರು ಮತ್ತು ಜೂನಿಯರ್ ರೆಡಿಕ್ರಾಸ್ ಘಟಕ ಇದರ ಕೌನ್ಸಿಲರ್ ಶ್ರೀಯುತ ಹರ್ಷಿತ್ ಸರ್ ರವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದ ಪ್ರತಿನಿಧಿಗಳಾಗಿ ಕುಮಾರಿ ದಿಶಾಲಕ್ಷ್ಮಿ ( ದ್ವಿತೀಯ ವಾಣಿಜ್ಯ ವಿಭಾಗ) ಹಾಗೂ ಶ್ರವಣ್ ಶೇಡಿಕಜೆ(ದ್ವಿತೀಯ ವಿಜ್ಞಾನ ವಿಭಾಗ) ಭಾಗವಹಿಸಿದ್ದರು . ಕುಮಾರಿ ದಿಶಾಲಕ್ಷ್ಮಿ ಸ್ವಾಗತಿಸಿ.ಕುಮಾರಿ ಅಶ್ವಿನಿ ಇವರು ನಿರೂಪಿಸಿ ಜೀವನ್ ಧನ್ಯವಾದ ಸಮರ್ಪಿಸಿದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading