ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಇದರ ವತಿಯಿಂದ ನಿವೇದಿತಾ ಜಯಂತಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಡಾ. ಯಶೋದಾ ರಾಮಚಂದ್ರ ಭಾಗವಹಿಸಿ ಭಗಿನಿ ನಿವೇದಿತಾ ರವರ ಸಮಾಜಮುಖಿ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು.ಸಭೆಯಲ್ಲಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯದ ಅಧ್ಯಕ್ಷರಾದ ಇಂದಿರಾ ರೈ, ಟ್ರಸ್ಟ್ ನಿರ್ದೇಶಕರುಗಳು, ಅನುಷ್ಠಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪುಷ್ಪಾಮೇದಪ್ಪ ಸ್ವಾಗತಿಸಿ ಟ್ರಸ್ಟ್ ನ ಕಾರ್ಯದರ್ಶಿ ಗುಣವತಿಕೊಲ್ಲಂತಡ್ಕ ಧನ್ಯವಾದ ಸಮರ್ಪಿಸಿದರು. ಟ್ರಸ್ಟ್ ನ ಜೊತೆ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು. ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಸಲಾಯಿತು. ನಿವೇದಿತಾ ಜಯಂತಿಯ ಪ್ರಯುಕ್ತ ಸರಕಾರಿ ಆಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರೈ,ಕಾರ್ಯದರ್ಶಿ ಗುಣವತಿಕೊಲ್ಲಂತಡ್ಕ,ಜೊತೆ ಕಾರ್ಯದರ್ಶಿ ಜಾಹ್ನವಿ ಕಾಂಚೋಡು, ನಿರ್ದೇಶಕರುಗಳಾದ ಚಂದ್ರಾ ಹೊನ್ನಪ್ಪ, ಪುಷ್ಪಾ ಮೇದಪ್ಪ, ರಾಜೀವಿ ಐವರ್ನಾಡು, ಮಮತಾ ಬೊಳುಗಲ್ಲು, ವೀಣಾ ಮೊಂಟಡ್ಕ, ಸರಸ್ವತಿ ಕಕ್ಕಾಡು,ಲೋಲಾಕ್ಷಿ ದಾಸನಕಜೆ, ಶಶಿಕಲಾ ದುಗ್ಗಲಡ್ಕ, ಹೇಮಲತಾ ಕಾಯಾರ,ಮಂಜುಳಾ ಅತ್ಯಡ್ಕ, ರಜನಿ ಶರತ್ ಉಪಸ್ಥಿತರಿದ್ದರು.