ಸುಳ್ಯ ತಾಲೂಕಿನ ಹೆಸರಾಂತ ವಾಹನ ಚಾಲನಾ ತರಬೇತಿ ಸಂಸ್ಥೆ ಶ್ರೀ ಮಂಗಳಾ ಎಂಟರ್ಪ್ರೈಸ್ ಇದರ ಗುತ್ತಿಗಾರು ಕಛೇರಿ ಉದ್ಘಾಟನೆಯ ಪ್ರಯುಕ್ತ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಂಬುಲೆನ್ಸ್ ಸೇವಾ ಯೋಜನೆಗೆ ದೇಣಿಗೆಯನ್ನು ಹಸ್ತಾಂತರ ಮಾಡುವ ಮೂಲಕ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಸ್ವಾತಿಕ್, ಅತಿಥಿಗಳಾದ ಸಂತೋಷ್ ಕುತ್ತಮೊಟ್ಟೆ, ಮಹೇಶ್ ಪುಚ್ಚಪ್ಪಾಡಿ, ವಚನ್ ದೇರಪ್ಪಜ್ಜನ ಮನೆ, ಉದಯ ಕುಮಾರ್ ದೇರಪ್ಪಜ್ಜನ ಮನೆ, ಧರ್ಮಪಾಲ ಪಂಜಿಪಳ್ಳ, ಶರತ್ ಕುಮಾರ್ ಅಡ್ಯಡ್ಕ, ಕೇಶವ ಅಡ್ತಲೆ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು. ಸೋಮಶೇಖರ್ ದೇವ ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ