,
ಚೂಂತಾರು ಮನೆಗೆ ಭೇಟಿ ನೀಡಿದ ರಮಾನಾಥ ರೈ ಲಕ್ಷ್ಮೀನಾರಾಯಣ ಭಟ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಡಾ.ರಾಜಾರಾಂ, ಅಶೋಕ್ ಚೂಂತಾರು ಇದ್ದರು.
ಸನಾತನ ಸಂಸ್ಕೃತಿ ಪರಂಪರೆಯ ಹಿರಿಯ ಕೊಂಡಿಯಾಗಿ ಸುಮಾರು ನಾಲ್ಕು ದಶಕಗಳ ಕಾಲ ಪುರೋಹಿತರಾಗಿ, ಸೇವೆ ಸಲ್ಲಿಸಿದ್ದ ವೇದ ವಿದ್ವಾಂಸ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರು ಅಗಲಿರುವುದು ತುಂಬಲಾರದ ನಷ್ಟ. ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸುಳ್ಯದ ಅಮರ ಪಡ್ನೂರು ಗ್ರಾಮದಲ್ಲಿರುವ ಚೂಂತಾರು ಮನೆಗೆ ಭೇಟಿ ನೀಡಿದ ಅವರು, ಲಕ್ಷ್ಮೀನಾರಾಯಣ ಭಟ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು. ಲಕ್ಷ್ಮೀನಾರಾಯಣರ ಕುಟುಂಬ ಸಂಸ್ಕಾರಯುತವಾಗಿ ಬೆಳೆದಿದೆ. ಹಾಗಾಗಿ ಭಟ್ಟರು ಮರೆಯಲಾಗದ, ಮರೆಯಬಾರದ ವಿಶೇಷ ವ್ಯಕ್ತಿತ್ವದವರಾಗಿದ್ದರು ಎಂದರು.
ಈ ಸಂಧರ್ಭದಲ್ಲಿ ಡಾ .ರಾಜಾರಾಂ, ಅಶೋಕ್ ಚೂಂತಾರು, ಮಹೇಶ್ ಚೂಂತಾರು, ನಾಕೇಶ ಚೂಂತಾರು, ರಾಮಕೃಷ್ಣ ಭಟ್ ಬೆಳಾಲು, ಗೀತಾ ಗಣೇಶ ಮುಂತಾದವರು ಉಪಸ್ಥಿತರಿದ್ದರು.