Ad Widget

ಹಳೆಗೇಟು: 20 ಸಾವಿರ ರೂಪಾಯಿಗಳನ್ನು ದೋಚಿ ಪರಾರಿಯಾದ ಕಳ್ಳರು

. . . . .

ಸುಳ್ಯ ಹಳೆಗೇಟಿನಲ್ಲಿರುವ ಡೊಮಿನಿಕ್ ಡಿಸೋಜಾ ಎಂಬುವವರ ಅಂಗಡಿಗೆ ಅ.26ರಂದು ರಾತ್ರಿ ನುಗ್ಗಿರುವ ಕಳ್ಳರು ಸುಮಾರು 20 ಸಾವಿರ ರೂಪಾಯಿ ನಗದು ದೋಚಿ‌ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಎಂದಿನಂತೆ ಬೆಳಿಗ್ಗೆ ಅಂಗಡಿ ಮಾಲಕರ ಮಗಳು ಬಂದು ಬಾಗಿಲು ತೆರೆಯಲು ಬಂದಾಗ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದ್ದು, ಕೂಡಲೇ ಅವರು ತಮ್ಮ ತಂದೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ.

ನಂತರ ಅವರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿ‌ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನ ಮಾಡಿರುವವರು ಅಂಗಡಿಯ ಕಟರ್ ಬೀಗವನ್ನು ಮುರಿದಿರುವ ಶಂಕೆಯನ್ನು ಅಂಗಡಿ ಮಾಲಿಕರು ಹೇಳಿದ್ದು ಕ್ಯಾಶ್ ಕೌಂಟರಿನಲ್ಲಿದ್ದ ಸುಮಾರು ೨೦ ಸಾವಿರಕ್ಕೂ ಹೆಚ್ಚು ರೂಪಾಯಿಗಳನ್ನು ತೆಗೆದಿರುವ ಕಳ್ಳರು‌ ಕ್ಯಾಶ್ ಕೌಂಟರ್ ಗೆ ನೀರನ್ನು ಹಾಕಿ ಹೋಗಿರುವುದಾಗಿ ಘಟನೆ ವರದಿಯಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!