Ad Widget

ಬಹುಬೇಡಿಕೆಯ ನಾಟಿಕೋಳಿ ಮೊಟ್ಟೆ ಉದ್ಯಮ ಆರಂಭಿಸಿ ಯಶಸ್ಸು ಗಳಿಸಿದ ಮೆಲ್ವಿನ್ ಪಾಯ್ಸ್

ಕೋವಿಡ್ ಸಂಕಷ್ಟದ ಸಮಯದಲ್ಲಿ ಉದ್ಯೋಗ ಬಿಟ್ಟು ಊರಿಗೆ ಬಂದು ಸ್ವ ಉದ್ಯೋಗ ಆರಂಭಿಸಿ ಯಶಸ್ಸು ಕಂಡವರೇ ಮೆಲ್ವಿನ್ ಪಾಯ್ಸ್. ಸಾವಯವ ನಾಟಿ ಕೋಳಿ ಮೊಟ್ಟೆಯ ಉದ್ಯಮವನ್ನು ಪ್ರಾರಂಭಿಸಿ ಬಿವಿ 380 ನಾಟಿಕೋಳಿಯಿಂದಲೇ ಅಭಿವೃದ್ಧಿಪಡಿಸಿದ ಮೊಟ್ಟೆಗಾಗಿಯೇ ಸಾಕುವ ಕೋಳಿಯನ್ನು ತಂದು ಸಾಕಲು ಪ್ರಾರಂಭಿಸಿ ಯಶಸ್ಸು ಗಳಿಸಿದರು.2020ರ ಕೋವಿಡ್ ಸಮಯದಲ್ಲಿ ಮನೆಯಲ್ಲೇ ಇದ್ದು ಶಾಲೆಯಲ್ಲಿ ಯಾವುದೇ ಚಟುವಟಿಕೆಗಳು ಇಲ್ಲದೆ ಸರಿಯಾದ ವೇತನ ದೊರೆಯದೇ ಇದ್ದಾಗ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟು ಬೆಂಗಳೂರಿನಿಂದ ಮನೆಗೆ ಬಂದು ಜೀವನಕ್ಕೆ ಅನುಕೂಲವಾಗುವಂತೆ ಏನಾದರೂ ಮಾಡಬೇಕೆಂದುಕೊಂಡರು.

. . . . . . .

ಯೂಟ್ಯೂಬ್ ನಲ್ಲಿ ಬಿವಿ 380 ಸಾವಯವ ಆರೋಗ್ಯವರ್ಧಕ ನಾಟಿಕೋಳಿಯ ಬಗ್ಗೆ ನೋಡಿ ಆಕರ್ಷಿತರಾಗಿ ಮಾಹಿತಿ ಪಡೆದುಕೊಂಡು ಮನೆಯ ಟೆರೇಸ್ ಮೇಲೆ ನಾಟಿಕೋಳಿ ಮೊಟ್ಟೆ ಉದ್ಯಮ ಆರಂಭಿಸಿದರು. ಈ ಬಿವಿ380 ಮೊಟ್ಟೆಯನ್ನು ಆರೋಗ್ಯ ಮೊಟ್ಟೆ ಎಂತಲೂ ಕರೆಯುತ್ತಾರೆ. ಈ ನಾಟಿ ಕೋಳಿ ಮೊಟ್ಟೆಯು ಪೌಷ್ಠಿಕ ಆಹಾರ ಹಾಗೂ ಸಾಮಾನ್ಯವಾಗಿ ಮೊಟ್ಟೆ ತಿನ್ನದವರು ತುಂಬಾ ವಿರಳ ಎಂದುಕೊಂಡು ಸಾವಯವ ಭರಿತ ಮೊಟ್ಟೆ ಸಿಗುವುದು ಕಷ್ಟಕರ ಎಂದು ತಾವೇ ಸ್ವತಃ ಕೋಳಿ ಸಾಕಾಣಿಕೆ ಪ್ರಾರಂಭಿಸಿದರು. ಆಧುನಿಕ ಯುಗದಲ್ಲಿ ವ್ಯಾಪಾರಕ್ಕಾಗಿ ಸ್ಟಿರಾಯ್ಡ್ ಇಂಜೆಕ್ಷನ್ ಕೊಟ್ಟು ಮತ್ತು ಅನೇಕ ರಾಸಾಯನಿಕ ಔಷಧಿಗಳನ್ನು ಬಳಸಿಕೊಂಡು ಎರಡೇ ತಿಂಗಳಲ್ಲಿ ಮೊಟ್ಟೆಯನ್ನು ಮಾರುಕಟ್ಟೆಗೆ ತಂದು ಇದನ್ನು ತಿಂದ ಜನರೂ ಅಷ್ಟೇ ವೇಗವಾಗಿ ಮುಪ್ಪನ್ನು ಹೊಂದುವುದಲ್ಲದೆ ತಲೆ ಕೂದಲು ಬೆಳ್ಳಗಾಗಿ ವಯಸ್ಸಾದಂತೆ ಕಾಣುವುದಲ್ಲದೆ ನಿಶಕ್ತಿಯನ್ನು ಅನುಭವಿಸುತ್ತಾರೆ. ಹಾಗೂ ಕೋಳಿ ಮಾಂಸವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಮನಗಂಡು ಜನರಿಗೆ ಉತ್ತಮ ಗುಣಮಟ್ಟದ ಸಾವಯವ ಆರೋಗ್ಯಭರಿತ ಮೊಟ್ಟೆಯನ್ನು ಕೊಡುವ ಉದ್ದೇಶ ಇವರದಾಗಿತ್ತು. ಈ ಮೊಟ್ಟೆಯನ್ನು ತಿನ್ನುವುದರಿಂದ ಅನೇಕ ರೀತಿಯಲ್ಲಿ ಉತ್ತಮ ಆರೋಗ್ಯ ಮತ್ತು ಮುಖ್ಯವಾಗಿ ಮೊಟ್ಟೆಯನ್ನು ಅರ್ಧ ಬೇಯಿಸಿ ತಿನ್ನುವುದರಿಂದ ಲೈಂಗಿಕ ತೊಂದರೆಗಳನ್ನು ನಿವಾರಿಸಬಹುದು ಪುರುಷರ ಲೈಂಗಿಕ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಯಥೇಚ್ಚವಾಗಿ ಕ್ಯಾಲ್ಸಿಯಂ ಇರುವುದರಿಂದ ಮಹಿಳೆಯರಲ್ಲಿ ಉಂಟಾಗುವಂಥ ಕ್ಯಾಲ್ಸಿಯಂ ಕೊರತೆ ಹಾಗೂ ಕೈಕಾಲು ಗಂಟುನೋವು ಸೊಂಟನೋವು ಕಡಿಮೆಗೊಳಿಸುದರ ಜೊತೆಗೆ ಮೂಳೆ ಸವೆತವನ್ನು ತಡೆಯುವ ಮತ್ತು ಮಹಿಳೆಯರ ಮುಟ್ಟಿನ ತೊಂದರೆಗಳು ನೋವು ನಿವಾರಿಸುವಲ್ಲಿ BV380 ಮೊಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ.

ಬಿವಿ380 ಮೊಟ್ಟೆಯ ಉಪಯೋಗ ಹಾಗೂ ಗುಣ ಲಕ್ಷಣಗಳು

ಈ ಮೊಟ್ಟೆಯಲ್ಲಿ ಒಮೆಗಾ 3 ಅಂಶ ಹೊಂದಿರುವುದರಿಂದ ಹೃದಯ ಕಾಯಿಲೆ ಇರುವವರು ಈ ರೋಗದಿಂದ ಮುಕ್ತಿಯನ್ನು ಹೊಂದಬಹುದು. ಮಕ್ಕಳಿಗೆ ತಿನ್ನಿಸುವುದರಿಂದ ದೇಹದ ಉತ್ತಮ ಬೆಳವಣಿಗೆಗೆ, ಮೆದುಳಿನ ನರಗಳ ಬೆಳವಣಿಗೆ ಮತ್ತು ಬುದ್ಧಿ ಶಕ್ತಿ ಹೆಚ್ಚಾಗಲು ಉತ್ತಮ ಪೌಷ್ಟಿಕ ಆಹಾರ. ಈ ಮೊಟ್ಟೆಯಲ್ಲಿ ಯಥೇಚ್ಛವಾಗಿ ಸತು, ಜಿಯಾಂಗ್ಸಾಥಿನ್, ಲುಟೆನ್ ಮತ್ತು ವಿಟಮಿನ್ ಎ ಇರುವುದರಿಂದ ಕಣ್ಣಿನ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತದೆ.

ಒಳ್ಳೆಯ ಕೊಬ್ಬಿನ ಅಂಶ ಇರುವುದರಿಂದ ದೇಹದಲ್ಲಿನ ಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ದೇಹವನ್ನು ಸಮತೋಲನವಾಗಿರಿಸುತ್ತದೆ. ವಿಟಮಿನ್‌ ಮತ್ತು ಮಿನರಲ್ಸ್‌ಗಳು ಹೆಚ್ಚಾಗಿ ಇರುವುದರಿಂದ ಚರ್ಮದ ಆರೋಗ್ಯವನ್ನು‌ ಕಾಪಾಡುತ್ತದೆ ಮತ್ತು ಚರ್ಮದ ಕಾಯಿಲೆಗಳು ಬರದ ಹಾಗೆ ತಡೆಯುತ್ತದೆ. ಈ ಮೊಟ್ಟೆಯನ್ನು ದಿನಕ್ಕೆ 2 ತಿನ್ನುವುದರಿಂದ ದೇಹಕ್ಕೆ ಬೇಕಾದ ಶಕ್ತಿ ಉತ್ಪತ್ತಿಯಾಗುತ್ತದೆ. ಹೇರಳವಾದ ವಿಟಮಿನ್ ‘ಎ’ ವಿಟಮಿನ್ ’12’ ಮತ್ತು ಸೆಲೆನಿಯಂನಂತಹ ಅಂಶಗಳು ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೇರಳವಾದ ಪ್ರೋಟೀನ್ ಇರುವುದರಿಂದ ಕ್ರೀಡಾಪಟುಗಳಿಗೆ ಮತ್ತು ದೇಹದಾಡ್ಯತೆಯ ಪಟುಗಳಿಗೆ ಉತ್ತಮ ಫಲಿತಾಂಶ ನೀಡುತ್ತದೆ.

ಈ ಮೊಟ್ಟೆಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ನ್ಯೂಟ್ರಿಯಂಟ್ಸ್ ಇರುವುದರಿಂದ ಗರ್ಭಿಣಿಯರ ಆರೋಗ್ಯಕ್ಕೆ ಮತ್ತು ಮಗುವಿನ ಉತ್ತಮ ಬೆಳವಣಿಗೆಗೆ ಸಹಾಯವಾಗುತ್ತದೆ. ಬಹಳಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಮೂಳೆಗಳ ಬಲವರ್ಧನೆಯಾಗಿ ಮುರಿತ ಕಡಿಮೆಯಾಗುತ್ತದೆ. ಈ ಮೊಟ್ಟೆಯಲ್ಲಿ ಸುಮಾರು 6ಗ್ರಾಂಗಳಷ್ಟು ಪ್ರೋಟೀನ್ ಅಂಶದ ಜೊತೆಗೆ ಸಾಕಷ್ಟು ಅಮೈನೋ ಆಮ್ಲಗಳ ಅಂಶಗಳು ಸೇರುವುದರಿಂದ ಮಾಂಸಖಂಡಗಳು ಚೆನ್ನಾಗಿ ರೂಪುಗೊಳ್ಳುತ್ತದೆ ಮತ್ತು ರಕ್ತದ ಒತ್ತಡ ನಿಯಂತ್ರಣವಾಗುತ್ತದೆ. ಈ ಕೋಳಿಗಳ ಮೊಟ್ಟೆಗಳು ಕಂದು ಬಣ್ಣವನ್ನು ಹೊಂದಿದ್ದು, ಹಳದಿ ಭಾಗ ಕಡಿಮೆ ಇದ್ದು, ಬಿಳಿಯ ಭಾಗ ಹೆಚ್ಚಿನ ಪ್ರಮಾಣದಲ್ಲಿದೆ. ಅಧಿಕ ಪ್ರಮಾಣದ ವಿಟಮಿನ್ಸ್, ಮಿನರಲ್ಸ್, ಪ್ರೋಟೀನ್, ಕ್ಯಾಲ್ಸಿಯಂ ಹೊಂದಿದೆ. ಕಾರಣ ಈ ಕೋಳಿಗಳಿಗೆ ಯಾವುದೇ ರಾಸಾಯನಿಕ ಆಹಾರಗಳಾಗಲಿ, ಇಂಜೆಕ್ಷನ್ ಆಗಲಿ, ಔಷಧಿಗಳನ್ನು ಬಳಸದೆ ಕೇವಲ ಕೆಲವು ಗರಿಕೆಹುಲ್ಲು, ಬಾಳೆಎಲೆ, ಪಶುಗಳು ತಿನ್ನುವ ವಿವಿಧ ರೀತಿಯ ಸೊಪ್ಪು, ರಾಗಿ, ಗೋಧಿ, ಜೋಳ ಹಾಗೂ ಹಲವು ತರದ ನುಚ್ಚು ಹೀಗೆ ಸಾವಯವ ಆಹಾರವನ್ನು ಕೊಟ್ಟು ಸಾಕಲಾಗುತ್ತದೆ.

ಈ ಮೊಟ್ಟೆಗಳನ್ನು ಸೇವಿಸುವುದರಿಂದ ಮುಪ್ಪನ್ನು ತಡೆಗಟ್ಟಬಹುದು ಎಂದು ಮೆಲ್ವಿನ್ ಪಾಯ್ಸ್ ರವರು ಹೇಳುತ್ತಾರೆ. ಕಲ್ಲುಗುಂಡಿ ನಿವಾಸಿ ಮೈಕಲ್ ಫ್ರಾನ್ಸಿಸ್ ಪಾಯ್ಸ್ ಮತ್ತು ಸೋಫಿಯಾ ಪಾಯ್ಸ್ ದಂಪತಿಗಳ ಪುತ್ರರಾಗಿರುವ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕಲ್ಲುಗುಂಡಿಯ ಸವೇರಪುರ ಕಿರಿಯ ಪುಷ್ಪ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿಯಲ್ಲಿ ಮುಗಿಸಿ ನಂತರ ಹೈಸ್ಕೂಲ್ ಮತ್ತು ಪದವಿಪೂರ್ವ ಶಿಕ್ಷಣವನ್ನು ಸಂಪಾಜೆ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರಿಗೆ ಚಿತ್ರಕಲೆಯಲ್ಲಿ ಚಿಕ್ಕಂದಿನಿಂದಲೂ ತುಂಬ ಆಸಕ್ತಿ ಉತ್ಸಾಹದಿಂದ ಚಿತ್ರಕಲೆಯಲ್ಲಿಯೇ ಮುಂದಿನ ವಿದ್ಯಾಭ್ಯಾಸವನ್ನು ಮಾಡಬೇಕೆಂದು ಬೆಂಗಳೂರಿನ ಹನುಮಂತ ನಗರದ ಕಲಾಮಂದಿರ ಕಲಾಶಾಲೆಯಲ್ಲಿ ಮತ್ತು ಗಿರಿನಗರದ ಚೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪದವಿಯನ್ನು ಪೂರ್ಣಗೊಳಿಸಿದರು. ನಂತರ 1ವರ್ಷಗಳ ಕಾಲ ಬೆಂಗಳೂರಿನ ಜಯಮಹಲ್ ನಲ್ಲಿರುವ ಗುಲಾಬಿ ಶಾಲೆಯಲ್ಲಿ ನಾನು ಚಿತ್ರಕಲಾ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸಿ ಚಿತ್ರಕಲೆಯಲ್ಲಿ D.M.C., D.F.A. , A.M.D. ಹಾಗೂ .M.F.A. ಪದವಿಯನ್ನು ಪಡೆದು ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಸೈಂಟ್ ಮಾರ್ಥಾಸ್ ಹೈಸ್ಕೂಲಿನಲ್ಲಿ ಸುಮಾರು 13 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸಿದರು.

ಇವರು ಪ್ರಸ್ತುತ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಂಪರ್ಕ ಸಂಖ್ಯೆ  ಮೊ: 99459 98139

( ಬರಹ : ಧನ್ಯಶ್ರೀ ಅಮ್ಮುಂಜ , ದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು ಪುತ್ತೂರು)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!