Ad Widget

ಕವನ : ಬದುಕಲ್ಲೊಂದು ಗೆಲುವಿರಬೇಕು, ಮುಖದಲ್ಲೊಂದು ನಗುವಿರಬೇಕು…

ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು…

. . . . . .

ಕಷ್ಟ ಕಳೆದ ಮೇಲೆ ಸುಖವು ದೊರಕಲೇಬೇಕು…

ಬದುಕು ಎಂದರೆ ಅಲ್ಲಿ ಸವಾಲುಗಳು ಇರಲೇಬೇಕು…

ಆ ಸವಾಲುಗಳನ್ನು ಎದುರಿಸುವ ಧೈರ್ಯ ನಮ್ಮಲ್ಲಿ ತುಂಬಿರಬೇಕು…

ಸೋಲು ಕಲಿಸಿದ ಪಾಠವ ನಾವು ಕಲಿಯಲೇಬೇಕು…

ಸಾವಿರ ಬಾರಿ ಸೋತರೂ ಕೊನೆಗೆ ಗೆಲ್ಲಲೇಬೇಕು…

ಗೆಲುವಿನ ಮೌಲ್ಯ ಅರಿತು ಮುಂದೆ ನಡೆಯಲೇಬೇಕು…

ಸೋತರೂ ಗೆದ್ದರೂ ಮುಖದಲ್ಲೊಂದು ನಗುವಿರಬೇಕು…

ಬದುಕಿನ ಪ್ರತಿ ಹೆಜ್ಜೆಯಲ್ಲೂ ಛಲವಿರಬೇಕು…

ಸೋಲಿಗೂ ಸೋಲಿಸಲಾಗದ ರೀತಿ ಬೆಳೆಯಬೇಕು…

ಗೆಲುವಿನ ಶಿಖರವ ತಲುಪಿದ ಮೇಲೂ ಸೋಲಿನ ಹಾದಿ ನೆನಪಿರಬೇಕು…

ನಮ್ಮುಸಿರು ನಿಂತು ಹೋದರೂ ಜಗದಲ್ಲಿ ನಮ್ಮ ಹೆಸರು ಶಾಶ್ವತವಾಗಿರಬೇಕು…

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!