ತುಳುನಾಡು ಹಲವು ಆಚಾರ, ವಿಚಾರ ನಂಬುಗೆಗಳನ್ನು ಹೊತ್ತು ನಿಂತ ನೆಲ. ಇಲ್ಲಿನ ಹಿರಿಯರು ಪರಿಸರದ ಪ್ರತಿಯೊಂದರಲ್ಲೂ ದೈವತ್ವ ಕಾಣುವ ಕೆಲಸ ಬಹಳ ಶ್ರದ್ಧೆಯಿಂದ ಮಾಡಿಕೊಂಡು ಬಂದು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಾ ಬಂದಿರುತ್ತಾರೆ. ಹಿರಿಯರ ನಂಬಿಕೆಯನ್ನು ಮುಂದಿಟ್ಟುಕೊಂಡು ಇಂದಿನ ಯುವ ಪೀಳಿಗೆ ಭರವಸೆಯ ಹೆಜ್ಜೆ ಇಡುತ್ತಿದೆ.
ತುಳುನಾಡ ಸಂಸ್ಕೃತಿ ಅನನ್ಯ ಅದ್ಭುತ, ಇಂತಹ ಮಣ್ಣಿನ ಸೊಗಡಿನ ಜೊತೆಗೆ ಬದುಕು ಸಾಗುತ್ತಿರುವ ಜನರ ಭಾವನೆಗಳಿಗೆ ಎಂದಿಗೂ ಧಕ್ಕೆಯಾಗದಿರಲಿ ಎಂಬ ಸಂದೇಶ ಸಾರುವ ಸಲುವಾಗಿ ಈ ವರುಷದ ದೀಪಾವಳಿಗೆ ಬೃಹತ್ ಗಾತ್ರದ ‘ಅಭಯ ನೀಡುವ ದೈವದ “ಪ್ರತಿರೂಪದ ಗೂಡು ದೀಪ ಮಾಡುವ ಮೂಲಕ ಅಡ್ಕಾರಿನ ವೈಪೈ ಗೆಳೆಯರ ಬಳಗ ಸಂಸ್ಕೃತಿ ಯ ಉಳಿಸಿ ಬೆಳೆಸುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಅಮಿತ್ ಅಡ್ಕಾರ್, ಪ್ರವೀಣ್ ಅಡ್ಕಾರ್, ಅಜಿತ್ ಅಡ್ಕಾರ್, ಅಕ್ಷಿತ್ ಅಡ್ಕಾರ್, ಆಶಿಕ್ ಮುಡೂರ್, ದಯಾನಂದ ಅಡ್ಕಾರ್,ಅರವಿಂದ್ ಆಡ್ಕಾರ್, ದೀಕ್ಷಿತ್ ಅಡ್ಕಾರ್, ಮೋಹನ ಅಡ್ಕಾರ್, ನವೀನ ಅಡ್ಕಾರ್, ಪ್ರದೀಪ್ ಅಡ್ಕಾರ್, ಸಂದೇಶ್ ಅಡ್ಕಾರ್, ಸತೀಶ್ ಅಡ್ಕಾರ್, ಶಶಿ ಅಡ್ಕಾರ್, ಶಿವ ಅಡ್ಕಾರ್, ಶಿವಪ್ರಸಾದ್ ಅಡ್ಕಾರ್, ವಿಜಯ ಅಡ್ಕಾರ್, ರವಿ ಅಡ್ಕಾರ್, ದೀವಿತ್ ಅಡ್ಕಾರ್, ಸುದೀಶ್ ಅಡ್ಕಾರ್ ಇವರು ಈ ವೈಫೈ ಗೆಳೆಯರ ಬಳಗದ ಸದಸ್ಯರಾಗಿದ್ದಾರೆ.