- Saturday
- November 23rd, 2024
ಗುತ್ತಿಗಾರು ಸ.ಪ.ಪೂ.ಕಾಲೇಜಿನ ಹೈಸ್ಕೂಲ್ ವಿಭಾಗ ಪ್ರಾರಂಭವಾಗಿ 50 ವರ್ಷ ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಸಚಿವರಾದ ಎಸ್. ಅಂಗಾರರವರು ಶಾಲಾ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ರೂ.5 ಲಕ್ಷ ಅನುದಾನ ಒದಗಿಸಿದ್ದು ಇಂದು ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್, ಶಾಲಾ ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಮುತ್ಲಾಜೆ, ಎಸ್.ಡಿ.ಎಂ.ಸಿ....
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ. ರಾಜೇಂದ್ರ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಡಾ.ಕೆ.ವಿ. ರಾಜೇಂದ್ರ ಅವರಿಂದ ತೆರವಾದ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ಇದರ ವತಿಯಿಂದ ನವೆಂಬರ್ ತಿಂಗಳಿನಿಂದ ಪ್ರತೀ ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯವರೆಗೆ ನವೋದಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ನಡೆಯಲಿದ್ದು, ಈ ಪರೀಕ್ಷಾ ತರಬೇತಿಯ ದಾಖಲಾತಿ...
ಸೇವಾಜೆ-ಮಡಪ್ಪಾಡಿ ರಸ್ತೆಯಲ್ಲಿ ಸೇವಾಜೆ ಪ್ರಾಥಮಿಕ ಶಾಲೆಯ ಬಳಿಯ ದೊಡ್ಡ ತಿರುವಿನಲ್ಲಿ ಸಿಗುವ ಈ ಸೇತುವೆಯು ಮೂರು ರಸ್ತೆಗಳು ಸೇರುವ ಕೇಂದ್ರದಲ್ಲಿದೆ. ಈ ಸೇತುವೆಯು ಸುಮಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ನದಿಯು ಮಳೆಯ ರಭಸದಿಂದಾಗಿ ಉಕ್ಕಿ ಹರಿಯುವುದರಿಂದ ಸೇತುವೆಯು ತಳಭಾಗದಿಂದಲೇ ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿದ್ದು ಸೇತುವೆ ಮೇಲ್ಭಾಗದಲ್ಲಿ ತಡೆ ಬೇಲಿ ಮುರಿದು ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆಯೂ ಕೂಡ...