Ad Widget

ಹಳದಿ ರೋಗದ ಬಗ್ಗೆ ಸ್ವಯಂ ಘೋಷಿತ ಅರ್ಜಿ ವಿತರಣಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ ಇದರ ಆಶ್ರಯದಲ್ಲಿ ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ‘ಅಡಿಕೆ ಎಲೆ ಹಳದಿ ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತಾಗಿ’ ಮತ್ತು ಹಳದಿ ರೋಗದ ಬಗ್ಗೆ ಸ್ವಯಂ ಘೋಷಿತ ಅರ್ಜಿ ವಿತರಣಾ ಕಾರ್ಯಕ್ರಮ ಜರುಗಿತು.

. . . . .

ಕಾರ್ಯಕ್ರಮಕ್ಕೆ ಮಾಹಿತಿದಾರರಾಗಿ ಸಿಪಿಸಿಆರ್ ಐ ನ ಡಾ. ಭವಿಷ್ಯ ಅವರು ಆಗಮಿಸಿದ್ದರು.

ತಮ್ಮ ಉಪನ್ಯಾಸದಲ್ಲಿ ಅವರು ಅಡಿಕೆ ಗಿಡಗಳಿಗೆ ತಗಲಿರುವ ಈ ರೋಗ ಮಾರಕವಾಗಿದ್ದು ಇದರ ತಡೆಗಟ್ಟುವ ನೆರೆಯಲ್ಲಿ ನಡೆಯುತ್ತಿರುವ ಸಂಶೋಧನೆಗಳ ಕುರಿತಾಗಿ ವಿವರವಾದ ಮಾಹಿತಿಯನ್ನು ನೀಡಿದರು. ರೈತರು ತಮ್ಮ ತೋಟಗಳಿಗೆ ಸರಿಯಾದ ಕ್ರಮದಲ್ಲಿ ಪೋಷಕಾಂಶಗಳ ಒದಗಿಸುವ ಮತ್ತು ತೋಟಗಳ ತೇವಾಂಶವನ್ನು ನಿರ್ವಹಿಸುವ ಅಗತ್ಯತೆಗಳ ಬಗ್ಗೆ ಒತ್ತು ಹೇಳಿದರು.ಸದ್ಯದ ಪರಿಸ್ಥಿತಿಯಲ್ಲಿ ಈ ಎರಡು ವಿಚಾರದಲ್ಲಿ ರೈತರು ಜಾಗೃತೆವಹಿಸಿದರೆ ರೋಗಭಾದಿತ ತೋಟಗಳಲ್ಲಿ ಗಿಡಗಳ ಬಾಳಿಕೆಯನ್ನು ಹೆಚ್ಚಿಸಬಹುದು ಮತ್ತು ಇಳುವರಿಯನ್ನು ಸ್ವಲ್ಪ ಮಟ್ಟಿಗೆಯಾದರು ಉಳಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮವನ್ನು ಆರಂಭದಲ್ಲಿ ದೀಪ ಹಚ್ಚುವ ಮುಖಾಂತರ ಸಂಘದ ಗೌರವಾಧ್ಯಕ್ಷರಾದ ಶ್ರೀ ಹರಿಸಂದ್ರ ಮುಡ್ಕಜೆ ಚಾಲನೆ ನೀಡಿದರು . ನಂತರದಲ್ಲಿ ನಡೆದ ಸಂವಾದ ಕಾರ್ಯಕ್ರಮದ ನಿರ್ವಹಣೆಯನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಗೋಪಾಲ ಪೆರಾಜೆ ಮಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಎನ್ ಪಿ ಬಾಲಕೃಷ್ಣ, ಶ್ರೀ ರಮೇಶ್ ಶೆಟ್ಟಿ ಪರಾಜೆ ಮಾಲಕರು ಅನ್ನಪೂರ್ಣೇಶ್ವರಿ ಕಲಾಮಂದಿರ ಪೆರಾಜೆ, ಮತ್ತು ಸುಳ್ಯ ತಾಲೂಕಿನ ರೈತ ಸಂಘದ ಕಾರ್ಯದರ್ಶಿ ಶ್ರೀ ಭರತ್ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ಉಮೇಶ ಕುಂಬಳಚೇರಿ, ನೆಕ್ಕಿಲ ಗಂಗಾಧರ ಹೊದ್ದಟ್ಟಿ ಚಿದಾನಂದ, ಬಂಗಾರ ಕೋಡಿ ವಿಶ್ವನಾಥ, ವೇಣುಗೋಪಾಲ ಕುಂದಲಪಾಡಿ, ವೇದವ್ಯಾಸ, ಕತ್ತಲಡ್ಕ ಸಂಜೀವ, ಅಮಚೂರು ಭರತ, ಕುಂಬಳಕೇರಿ ಜಗದೀಶ, ಸೇರಿದಂತೆ ಸಾಕಷ್ಟು ಜನ ರೈತರು ಹಾಜರಿದ್ದು ಸಂವಾದದಲ್ಲಿ ಪಾಲ್ಗೊಂಡರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!