Ad Widget

ಸುಳ್ಯ : ಕೆ.ವಿ.ಜಿ., ಐ.ಟಿ.ಐ ಉಪ ಪ್ರಾಂಶುಪಾಲರಾಗಿ ದಿನೇಶ್ ಮಡ್ತಿಲ

. . . . . . . . .

. . . . . . .

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಆಡಳಿತದಡಿಯಲ್ಲಿರುವ ಕೆ.ವಿ.ಜಿ ಕೈಗಾರಿಕಾ ತರಭೇತಿ ಸಂಸ್ಥೆ ಸುಳ್ಯ ಇದರ ಉಪ ಪ್ರಾಂಶುಪಾಲರಾಗಿ ತರಭೇತಿ ಅಧಿಕಾರಿ ಶ್ರೀ ದಿನೇಶ್ ಮಡ್ತಿಲ ಅವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಪದೋನ್ನತಿ ನೀಡಿ ನೇಮಕ ಗೊಳಿಸಿದ್ದಾರೆ.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದು ೧೯೮೮ರಲ್ಲಿ ಕೆ.ವಿ.ಜಿ ಐ.ಟಿ.ಐ ಗೆ ಭೋದಕರಾಗಿ ಸೇರ್ಪಡೆಗೊಂಡರು. ೧೯೯೭ರಲ್ಲಿ ಸರಕಾರದ ಅನುದಾನದೊಂದಿಗೆ ತರಬೇತಿ ಅಧಿಕಾರಿಯಾಗಿ ಭಡ್ತಿಗೊಂಡರು. ಕಳೆದ ೩೪ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಐವರ್ನಾಡು ಗ್ರಾಮದ ಮಡ್ತಿಲ ಪುರುಷೊತ್ತಮ ಮತ್ತು ಶಿವಮ್ಮ ದಂಪತಿಗಳ ಪುತ್ರ.
ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ ಮತ್ತು ಅಕಾಡೆಮಿ ಕಛೇರಿಯ ಆಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading