Ad Widget

ಎನ್ನೆಂಸಿಯಲ್ಲಿ Pre RDC II ಮತ್ತು CATC ಶಿಬಿರ ಉದ್ಘಾಟನೆ

. . . . .

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ, ಮಡಿಕೇರಿ ಇದರ ಆಶ್ರಯದಲ್ಲಿ 8 ದಿನಗಳ Pre RDC II ಮತ್ತು CATC ಶಿಬಿರದ ಉದ್ಘಾಟನಾ ಸಮಾರಂಭವು ‌ಅಕ್ಟೋಬರ್ 16ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದರು ಮಾತನಾಡಿ,
ಎನ್ ಸಿ ಸಿ ಜೀವನಕ್ಕೆ ಶಿಸ್ತನ್ನು ಕಲಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನಾನು ಎನ್ ಸಿ ಸಿ ಕೆಡೆಟ್ ಆಗಿದ್ದೆ. ಆಗ ಈಗಿನಷ್ಟು ಸೌಕರ್ಯಗಳು ಇರಲಿಲ್ಲ, ಆದರೆ ಶಿಬಿರಗಳು ಮತ್ತು ಶಿಸ್ತು ಈಗಿನ ಹಾಗೆ ಆಗಲೂ ಇತ್ತು. ಇದನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಂಡಾಗ ನೀವೊಬ್ಬ ಸತ್ಪ್ರಜೆಯಾಗಲು ಸಾಧ್ಯ ಎಂದರು.

ಉದ್ಘಾಟನೆಯನ್ನು ನೆರವೇರಿಸಿ ಶಿಬಿರಕ್ಕೆ ಚಾಲನೆ ನೀಡಿದ 19 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ, ಮಡಿಕೇರಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಜೆಫ್ರಿನ್ ಗಿಲ್ ಬರ್ಟ್ ಅರನ್ಹಾ ಮಾತನಾಡಿ “ಶಿಸ್ತು, ಸಮಯಪಾಲನೆ, ಸಾಹಸ ಪ್ರವೃತ್ತಿ, ಜವಾಬ್ದಾರಿ, ಸಹಕಾರ ಇಂತಹ ಜೀವನ ಮೌಲ್ಯಗಳನ್ನು ಕೇವಲ ಸೈನ್ಯದಲ್ಲಿ ಮಾತ್ರವಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಲು ಎನ್ ಸಿ ಸಿ ಅಗತ್ಯ. ಎನ್ ಸಿ ಸಿ ಯಿಂದ ಹಾಗೂ ಶಿಬಿರಗಳಿಂದ ಪಡೆದ ಒಳ್ಳೆಯ ವಿಚಾರಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಾಗ ಮಾತ್ರ ಇಂತಹ ಶಿಬಿರಗಳು ಸಾರ್ಥಕ್ಯವನ್ನು ಪಡೆದುಕೊಳ್ಳುತ್ತವೆ ಎಂದರು.


. ಲೆಫ್ಟಿನೆಂಟ್ ಕರ್ನಲ್ ಚಾಕೋ ವೇದಿಕೆಯಲ್ಲಿ ಉಪಸ್ಥಿತರಿದ್ದರು ವಿವಿಧ ಬೆಟಾಲಿಯನ್ ಗಳ ಅಧಿಕಾರಿಗಳು, ವಿವಿಧ ಕಾಲೇಜಿನ ಅಸೋಸಿಯೇಟ್ ಎನ್ ಸಿ‌ ಸಿ ಆಫೀಸರ್ ಗಳು ಹಾಗೂ ಮಂಗಳೂರು, ಮಡಿಕೇರಿ, ಉಡುಪಿ, ಶಿವಮೊಗ್ಗ ಜಿಲ್ಲೆಗಳ 425 ಎನ್ ಸಿ ಸಿ ಕೆಡೆಟ್ ಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!