Ad Widget

ಸಂಪಾಜೆಗೆ ಲಯನ್ಸ್ ವಲಯಾಧ್ಯಕ್ಷ ಲ. ಗಂಗಾಧರ ರೈ ಭೇಟಿ

ಲಯನ್ಸ್ ವಲಯಾಧ್ಯಕ್ಷ ಲ.ಗಂಗಾಧರ ರೈ ಅವರ ವಲಯ ಭೇಟಿ ಕಾರ್ಯಕ್ರಮ ಸಂಪಾಜೆ ಜ್ಯೂನಿಯರ್ ಕಾಲೇಜಿನಲ್ಲಿ ಅ.8 ರಂದು ನಡೆಯಿತು.

. . . . . . . . .

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಪ್ರಾಂತ್ಯ 8, ವಲಯ 1ರ ಅಧ್ಯಕ್ಷರಾದ ಲಯನ್ ಗಂಗಾಧರ ರೈರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸೇವಾ ಚಟುವಟಿಕೆಯಲ್ಲಿ ಅಂಗವಿಕಲ ಮಹಿಳೆ ಆಸ್ಯಮ್ಮಳಿಗೆ ವ್ಹೀಲ್ ಚಯರ್, ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವ ಸಂಪಾಜೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕ್ರೀಡಾ ಜರ್ಸಿಗಳ ವಿತರಣೆ ಹಾಗೂ ಸುಳ್ಯ ಎಂ.ಬಿ. ಫೌಂಡೇಶನ್ ಸಾಂದೀಪನಿ ವಿಶೇಷ ಚೇತನ ಮಕ್ಕಳ ಶಾಲೆಗೆ ತಿಂಗಳಿಗೆ ತಲಾ 5000/-ರಂತೆ ಧನ ಸಹಾಯದ ಚೆಕ್ ನ್ನು ವಿತರಣೆ ಮಾಡಲಾಯಿತು.

. . . . . . .

ವೇದಿಕೆಯಲ್ಲಿ ಸಂಪಾಜೆ ಲಯನ್ ಕ್ಲಬಿನ ಅಧ್ಯಕ್ಷರಾದ ಲಯನ್ ನಳಿನಿ ಕಿಶೋರ್ ಕುಮಾರ್, ಲಯನ್ ಎನ್ವೈ ಲಯನ್ ಲಿಜೋ ಜೋಸ್ , ಗುತ್ತಿಗಾರು, ಸುಳ್ಯ ಕ್ಲಬಿನ ಅಧ್ಯಕ್ಷರು, ಸಂಪಾಜೆ ಕ್ಲಬಿನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಂತಿಯ ಅಧ್ಯಕ್ಷರಾದ ಲಯನ್ ಸಂದ್ಯಾಸಚಿತ್ ರೈ, ಲಯನ್ಸ್ ಸುಳ್ಯ, ಕಡಬ, ಗುತ್ತಿಗಾರು, ಪಂಜ ಹಾಗೂ ಸಂಪಾಜೆ ಲಯನ್ಸ್ ಕ್ಲಬಿನ ಸದಸ್ಯರು ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading