ಸುಳ್ಯ ಶ್ರೀ ಶಾರದಾಂಬೋತ್ಸವ ಸಮಿತಿ ವತಿಯಿಂದ ಅ.2 ರಿಂದ ಆರಂಭಗೊಂಡ ದಸರಾ ಉತ್ಸವವು ಇಂದು ಶೋಭಾಯಾತ್ರೆಯೊಂದಿಗೆ ತೆರೆಕಂಡಿತು. ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ , ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ , ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ 51 ನೇ ವರ್ಷದ ಶ್ರೀ ಶಾರದಾಂಬಾ ಉತ್ಸವವು ಅದ್ದೂರಿ ಮೆರವಣಿಗೆಯಲ್ಲಿ ಶೃಂಗಾರಗೊಂಡ ರಥದಲ್ಲಿ ಸಾಗಿ ಬಳಿಕ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಪಯಸ್ವಿನಿ ನದಿಯಲ್ಲಿ ಭಕ್ತಿಯಿಂದ ವಿಸರ್ಜಿಸಲಾಯಿತು . ಶೋಭಾಯಾತ್ರೆಯಯಲ್ಲಿ ಆಕರ್ಷಕ ಸ್ತಬ್ಧ ಚಿತ್ರಗಳು ಜನಮನ ಸೆಳೆದವು. ಶ್ರೀ ದೇವಿಯ ವೈಭವದ ಶೋಭಾಯಾತ್ರೆಯು ಆರಂಭಗೊಂಡು ಶೋಭಾಯಾತ್ರೆಯಲ್ಲಿ ವೀರ ಕೇಸರಿ ವಿಷ್ಣು ಸರ್ಕಲ್, ಗಜಕೇಸರಿ ಜಟ್ಟಿಪಳ್ಳ, ಬೆನಕ ಕಲಾ ಕ್ರೀಡಾ ಸಂಘ, ಡಿ.ಜೆ.ಫ್ರೆಂಡ್ಸ್ ಸುಳ್ಯ, ಗೆಳೆಯರ ಬಳಗ ಹಳೆಗೇಟು, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ, ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ, ಅರಣ್ಯ ಇಲಾಖೆ, ಜಿ.ಪಂ. ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ದೀನ ದಯಾಳ್ ಶಿಕ್ಷಣ ಮತ್ತು ರೂರಲ್ ಮತ್ತು ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್ ಪ್ರಾಯೋಜಿತ ಟ್ಯಾಬ್ಲೊಗಳು ಸೇರಿದಂತೆ ವರ್ಣರಂಜಿತವಾಗಿ ಶೋಭಾಯಾತ್ರೆ ನಡೆಯಿತು.
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್,ಅಧ್ಯಕ್ಷ ಚಿದಾನಂದ ವಿದ್ಯಾನಗರ, ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ನವೀನ್‌ಚಂದ್ರ ಕೆ.ಎಸ್, ಉಪಾಧ್ಯಕ್ಷ ನಾರಾಯಣ ಕೇಕಡ್ಕ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವ ಸಲಹೆಗಾರರಾದ ಡಾ.ಲೀಲಾಧರ್ ಡಿ.ವಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪ್ರದೀಪ್ ಕೆ.ಎನ್. ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಹಾಗು ಮೂರು ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.