ಸುಳ್ಯ ಸರಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ಮಾರುತಿ 800 ಕಾರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಇಂದು ಪತ್ತೆಯಾಗಿದೆ.
ಪೆರಾಜೆಯ ಪೆರಂಗಾಜೆ ಲೋಕಯ್ಯ ಎಂಬವರ ಪುತ್ರ ಗೌರೀಶ್ ಎಂಬವರ ಮೃತದೇಹ ಎನ್ನಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿ.ವೈ.ಎಸ್.ಪಿ. ವೀರಯ್ಯ ಹಿರೇಮಠ್ ,ಸುಳ್ಯ ಪಿ.ಎಸ್.ಐ. ದಿಲೀಪ್ ಹಾಗೂ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಗೌರೀಶ್ ನ ಪತ್ನಿ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದ್ದು, ತಂದೆ,ತಾಯಿ, 1 ಗಂಡು ಹಾಗೂ 1 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ..