- Thursday
- April 3rd, 2025

ಏನೆಕಲ್ಲು ಸಂಜೀವಿನಿ ಕಟ್ಟಡದಲ್ಲಿ ನವರಾತ್ರಿ ಪ್ರಯುಕ್ತ ಹೊಲಿಗೆ ಯಂತ್ರಗಳಿಗೆ, ಆಯುಧ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ, ಎಂ.ಬಿ.ಕೆ. ಹೇಮಾವತಿ, ಹೊಲಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಾಲೆಮಜಲು ಅಮೃತ ಯುವತಿ ಮಂಡಲದ ವತಿಯಿಂದ ಮಕ್ಕಳಿಗೆ ಏಳು ದಿನಗಳ ಕಾಲ ಕುಣಿತ ಭಜನೆ ತರಬೇತಿ ಕಾರ್ಯಕ್ರಮ ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ನಾಲ್ಕೂರು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಡಿ.ಆರ್.ಉದಯಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಜನಾ ತರಬೇತುದಾರರಾದ ರಮೇಶ್ ಮೆಟ್ಟಿನಡ್ಕ ಭಜನಾ ಸಮಿತಿಯ ಸಂಚಾಲಕಿ ಪವಿತ್ರ ಕುಕ್ಕುಜೆ, ಅಮೃತ...