Ad Widget

ಸುಳ್ಯ: ಪಂಚಾಯತ್ ನೌಕರರ ರಾಜ್ಯ ವ್ಯಾಪ್ತಿಯ ಹೋರಾಟದ ಕುರಿತು ಪೂರ್ವಭಾವಿ ಸಭೆ

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಸುಳ್ಯ ತಾಲೂಕು ಸಮಿತಿ ಇದರ ವತಿಯಿಂದ ಪಂಚಾಯತ್ ನೌಕರರ ರಾಜ್ಯ ವ್ಯಾಪ್ತಿಯ ಹೋರಾಟದ ಕುರಿತು ಪೂರ್ವಭಾವಿ ಸಭೆಯು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

. . . . . . .

ಪಂಚಾಯತ್ ನೌಕರರ ಸಮಸ್ಯೆಗಳಿಗೆ ಸಂಘ ದ ವತಿಯಿಂದ ಸರ್ಕಾರಕ್ಕೆ ಹಲವಾರು ಮನವಿಗಳನ್ನು ನೀಡಿದರೂ ಇದುವರೆಗೂ ಯಾವುದೇ ಸ್ಪಂದನೆ ಇಲ್ಲದೇ ಇರುವುದರಿಂದ ರಾಜ್ಯ ವ್ಯಾಪ್ತಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಸುಳ್ಯ ತಾಲೂಕುನಿಂದ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸುವುದು ಮತ್ತು ಪ್ರತಿಭಟನೆಗೆ ಸಂಪೂರ್ಣ ಸಹಕಾರ ನೀಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಂತರ ಈ ಕುರಿತು ವಲಯವಾರು ಹೋರಾಟ ಸಮಿತಿಗಳನ್ನು ರಚಿಸಲಾಯಿತು.

ಸಭೆಯಲ್ಲಿ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷ ನೇತ್ರಾವತಿ ಮರ್ಕಂಜ, ಕಾರ್ಯದರ್ಶಿ ಗಿರಿಧರ ಕಳಂಜ ಹಾಗೂ ಜಿಲ್ಲಾ ಸಮಿತಿಯ ಸದಸ್ಯ ಯಶವಂತ ಅಮರ ಮುಡ್ನೂರು ಹಾಗೂ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಪುಟ್ಟರಾಜು ಮರ್ಕಂಜ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!