Ad Widget

ಅರಂತೋಡು: ಹಲವಾರು ಸಂಘಸಂಸ್ಥೆಗಳ ಸಹಭಾಗಿತ್ವಕ್ಕೆ ವೇದಿಕೆಯಾದ ಎನ್‌ಎಸ್‌ಎಸ್‌ ಶಿಬಿರ

ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 14 ನೇ ವಿಶೇಷ ವಾರ್ಷಿಕ ಶಿಬಿರ ಅರಂತೋಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

. . . . . . .

“ವಿದ್ಯಾರ್ಥಿಯುವಜನರ ದೃಷ್ಟಿ ಭಾರತದಲ್ಲಿ ಸರ್ವೋದಯದ ಸೃಷ್ಟಿ” ಅನ್ನುವ ಧ್ಯೇಯ ವಾಕ್ಯದಡಿ ಶಿಬಿರ ನಡೆಯಿತು. ಏಳು ದಿನಗಳ ಶಿಬಿರವೂ ಪ್ರಾರ್ಥನೆ , ಯೋಗ, ಧ್ಯಾನ, ಧ್ವಜಾರೋಹಣ, ಶ್ರಮದಾನ, ಶೈಕ್ಷಣಿಕ ತರಬೇತಿ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ, ಶಿಬಿರವಾಣಿ ರಚನೆ, ಶಿಬಿರ ಜ್ಯೋತಿ, ಶಿಬಿರಾಗ್ನಿ , ಹಲವಾರು ಸಂಘ ಸಂಸ್ಥೆಗಳ ಮಿಲನಕ್ಕೆ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಸಾಕ್ಷಿಯಾಯಿತು.

ಧ್ವಜಾರೋಹಣವನ್ನು ಸ್ಥಳೀಯರಾದ ತೀರ್ಥರಾಮ ಅಡ್ಕಬಳೆ, ಚಿದಾನಂದ , ಶೇಷಗಿರಿ, ಅಶ್ರಫ್ ಗುಂಡಿ, ವಿಶ್ವನಾಥ ಬಂಗಾರಕೋಡಿ, ಸುರೇಶ್ ವಾಗ್ಲೆ ನೆರವೇರಿಸಿದರು.ಶಾಲಾ ಆಟದ ಮೈದಾನ ವಿಸ್ತರಣೆಯ ಶ್ರಮದಾನದಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾಭಿವೃದ್ಧಿ ಸಮಿತಿ, ಶಾಲಾ ಪೋಷಕರು, ವಾಹನ ಮಾಲಕ ಚಾಲಕ ಸಂಘ, ಶ್ರೀ ದುರ್ಗಾ ಫ್ರೆಂಡ್ಸ್ , ಶ್ರೀ ದುರ್ಗಾ ಮಾತಾ ಮಹಿಳಾ ಮಂಡಲ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘ, ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯ, ಶ್ರೀ ತಂಬುರಾಟಿ ಸೇವಾ ಸಮಿತಿ , ಗರುಡ ಫ್ರೆಂಡ್ಸ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘಗಳು ಭಾಗವಹಿಸಿದ್ದರು. ಸುಮಾರು ಮೂವತ್ತು ಲೋಡ್ ಮಣ್ಣನ್ನು ಸಮತಟ್ಟ ಮಾಡಿ ಶಾಲಾ ಕ್ರೀಡಾಂಗಣವನ್ನು ವಿಸ್ತರಿಸುವ ಕಾರ್ಯ ನಿರ್ವಹಿಸಿದ್ದಾರೆ.

ಶೈಕ್ಷಣಿಕ ಕಾರ್ಯಕ್ರಮದಲ್ಲಿ ಗ್ರಾಮ ಸಮೀಕ್ಷೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮಾಲಿನಿ ವಿನೋದ್ ಉಳುವಾರು, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ‌ಜಯಂತಿ , ಆನಂದ, ಶ್ರೀಮತಿ ಪ್ರಮೀಳಾ, ಶ್ರೀಮತಿ ಮಂಜುಳಾ, ಶ್ರೀಮತಿ ವಿಶಾಲ, ಶ್ರೀಮತಿ ಹರಿಣಾಕ್ಷಿ ನೇತೃತ್ವದಲ್ಲಿ ನಡೆಯಿತು. ಶಾರದಾ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಸನ್ನ “ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕಲೆ ” , ಶ್ರೀ ಕ್ಷೇತ್ರ ಧ. ಗ್ರಾ . ಯೋಜನೆಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ” ಸಮಾಜದ ಪ್ರಗತಿಯಲ್ಲಿ ಸ್ವಸಹಾಯ ಸಂಘಗಳ ಪಾತ್ರ” , ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ “ಪಂಚಾಯತ್ ರಾಜ್ ವ್ಯವಸ್ಥೆ” ಮತ್ತು ನಿವೃತ್ತ ಮುಖ್ಯೋಪಾಧ್ಯಯರಾದ ಚಿದಾನಂದ “ಭಾಷಾ ಕಲಿಕೆಯಲ್ಲಿ ಧ್ವನಿ ವಿನ್ಯಾಸದ ಮಹತ್ವ” ಕುರಿತು ಶಿಬಿರಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ಶೈಕ್ಷಣಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಸಂತ, ಕಿಶೋರ್ ಕುಮಾರ್, ಅಬ್ದುಲ್, ಜತ್ತಪ್ಪ ಮಾಸ್ತರ್ ವಹಿಸಿದ್ದರು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರಾದ ಶ್ರೀಮತಿ ಪುಷ್ಪಾ ಮೇದಪ್ಪ, ವಿನೋದ್ ಉಳುವಾರು, ಶ್ರೀಮತಿ ರತ್ನಾವತಿ ಅಳಿಕೆ, ಸತೀಶ್ ನಾಯ್ಕ,ಶ್ರೀಮತಿ ಮದುಮಾಲತಿ, ಶ್ರೀಮತಿ ಹೊನ್ನಮ್ಮ, ಜನಾರ್ಧನ ಇರ್ಣೆ, ಶ್ರೀಜೀತ್ , ಶ್ರೀಮತಿ ರೇವತಿ, ಶ್ರೀಮತಿ ದಿನಮಣಿ , ಚಿದಾನಂದ, ಶ್ರೀಮತಿ ಗಂಗಮ್ಮ, ಯಶವಂತ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.ಶಿಬಿರದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಮಕ್ಕಳು,ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಸ್ಕೌಟ್ಸ್ ವಿದ್ಯಾರ್ಥಿಗಳು, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಬಿರಾಗ್ನಿ, ಶಿಬಿರ ಜ್ಯೋತಿ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಪ್ರಾಂಶುಪಾಲರಾದ ರಮೇಶ್ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್, ಪೂರ್ವಾಧ್ಯಕ್ಷರಾದ, ವೆಂಕಟರಮಣ ಮೇರ್ಕಜೆ, ಪದ್ಮಯ್ಯ , ನಿವೃತ್ತ ಮುಖ್ಯೋಪಾಧ್ಯಾಯ ಚಿದಾನಂದ ಅಡ್ತಲೆ, ಧನಂಜಯ ಕಲ್ಲುಗದ್ದೆ , ವಿಶ್ವನಾಥ ಬಂಗಾರಕೋಡಿ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ, ಶಿಕ್ಷಕಿರಾದ ಶ್ರೀಮತಿ ಸರಸ್ವತಿ, ಶ್ರೀಮತಿ ಭಾನುಮತಿ ಭಾಗವಹಿಸಿದ್ದರು. ಶಿಬಿರಾಧಿಕಾರಿ ಗೌರಿಶಂಕರ ಪ್ರತಿಜ್ಞಾ ವಿಧಿ ಬೋಧಿಸಿದರುಶಿಬಿರದ ಯೋಗ, ಧ್ಯಾನ ಪ್ರಾಣಾಯಾಮ ತರಬೇತಿಯನ್ನು ವಿಶ್ವನಾಥ ಬಂಗಾರಕೋಡಿ, ಕುಮಾರಿ ಸ್ವಾತಿಕ ಅಡ್ಕಬಳೆ, ಶ್ರೀ ಮೋಹನ್ ಚಂದ್ರ, ಸುರೇಶ್ ವಾಗ್ಲೆ ನಡೆಸಿಕೊಟ್ಟರು.ಶಿಬಿರಕ್ಕೆ ಸ್ಥಳೀಯ ಸಂಸ್ಥೆಗಳು , ದಾನಿಗಳು, ಸಹಕರಿಸಿದರು. ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪವನ್ ಕುಮಾರ್ ಮತ್ತು ಸಿಬ್ಬಂದಿಗಳು ವೈದ್ಯಕೀಯ ನೇರವು ನೀಡಿದರು.

ಶಾಲಾ ಅಕ್ಷರ ದಾಸೋಹ ಸಿಬ್ಬಂದಿ ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಬಿಂದು ಅಡುಗೆ ಕಾರ್ಯದಲ್ಲಿ ಸಹಕರಿಸಿದರು. ಶಿಬಿರಾಧಿಕಾರಿ ಶ್ರೀ ಗೌರಿಶಂಕರ, ಸಹಾಯಕ ಶಿಬಿರಾಧಿಕಾರಿ ಲಿಂಗಪ್ಪ,ನಿಕಟಪೂರ್ವಾ ಕಾರ್ಯಕ್ರಮಾಧಿಕಾರಿ ಮೋಹನ್ ಚಂದ್ರ, ಸುರೇಶ್ ವಾಗ್ಲೆ, ಪದ್ಮಕುಮಾರ್, ಶ್ರೀಮತಿ ಭಾಗ್ಯಶ್ರೀ ಶ್ರೀಮತಿ ವಿದ್ಯಾಶಾಲಿ, ಶ್ರೀಮತಿ ನಂದಿನಿ, ಶ್ರೀಮತಿ ಶಾಂತಿ, ಶ್ರೀಮತಿ ಅಶ್ವಿನಿ, ಚಿದಾನಂದ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!