Ad Widget

ಪೇರಾಲು ಫ್ರೆಂಡ್ಸ್ ತಂಡದಿಂದ ಸುಳ್ಯದ ಇಬ್ಬರ ಚಿಕಿತ್ಸೆಗೆ 40 ಸಾವಿರ ಧನಸಹಾಯ

ಪೇರಾಲಿನ ಯುವಕರ ತಂಡ ಕ್ರಿಕೆಟ್ ಪಂದ್ಯಾಟವನ್ನು ಆ.2 ರಂದು ನಡೆಸಿತ್ತು. ಇದರಲ್ಲಿ ಒಟ್ಟು 38 ತಂಡಗಳು ಭಾಗವಹಿಸಿ ಒಂದು ತಂಡದ ನೋಂದಣಿ ಶುಲ್ಕ ರೂ. 800 ಪಡೆದುಕೊಂಡಿದ್ದರು. ಪಂದ್ಯಾಟ ಮುಗಿದು ಬಹುಮಾನ ವಿತರಣೆಯಾದ ಬಳಿಕ ಉಳಿಕೆ ಹಣ ಎಣಿಸಿದಾಗ ರೂ.40 ಸಾವಿರ ಸಂಗ್ರಹವಾಗಿತ್ತು.

. . . . . . .

ಈ ಹಣವನ್ನು ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿ ಕ್ಯಾನ್ಸರ್ ಕಾಯಿಲೆಯಿಂದ ಹಾಗೂ ಬೀರಮಂಗಲದ ಹಾರ್ದಿಕ ಎಂಬ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ತಲಾ 20 ಸಾವಿರ ದಂತೆ ನೀಡಲು ನಿರ್ಧಾರಕೈಗೊಳ್ಳಲಾಯಿತು.

ಅ.6 ರಂದು ಪೇರಾಲು ಫ್ರೆಂಡ್ಸ್ ತಂಡ ಹಾರ್ದಿಕ್ ನ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಗಿದೆ ಎಂದು ಫ್ರೆಂಡ್ಸ್ ಪೇರಾಲು ತಂಡದ ಅಶ್ವಿನ್ ಪೇರಾಲು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!