Ad Widget

ಗುತ್ತಿಗಾರು : ಕೈಕೊಟ್ಟ ಸರಕಾರಿ ಅಂಬ್ಯುಲೆನ್ಸ್ – ಜೀವ ಉಳಿಸಿದ ಅಮರ ಸೇನಾ ಅಂಬ್ಯುಲೆನ್ಸ್

ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಸಂದರ್ಭದಲ್ಲಿ ಸರಕಾರಿ ಆಂಬುಲೆನ್ಸ್ ನ ಆಕ್ಸಿಜನ್ ಸಿಸ್ಟಮ್ ಕೈಕೊಟ್ಟ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಧಾವಿಸಿ ಬಂದ ಅಮರ ಚಾರಿಟೇಬಲ್ ಟ್ರಸ್ಟ್ ನ ಆಂಬುಲೆನ್ಸ್ ವಾಹನದಿಂದಾಗಿ ವ್ಯಕ್ತಿಯೊಬ್ಬರ ಜೀವ ಉಳಿದಿದೆ.

. . . . . . .

ಅ.1 ರಂದು ಸಂಜೆ ಕೊಲ್ಲಮೊಗ್ರದಿಂದ ಸುಳ್ಯಕ್ಕೆ ಉಸಿರಾಟದ ತೀವ್ರ ತೊಂದರೆಯಿದ್ದು ಅನಾರೋಗ್ಯ ದಿಂದ ಬಳಲುತ್ತಿದ್ದ ಕೆಂಚಪ್ಪ ಎಂಬವರನ್ನು ಸರಕಾರಿ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಅಳವಡಿಸಿ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಆ ವಾಹನದ ಆಕ್ಸಿಜನ್ ಸಿಸ್ಟಮ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಗುತ್ತಿಗಾರು ತಲುಪುತಿದ್ದಂತೆ ಸ್ಥಗಿತಗೊಂಡಿತು. ಈ ಸಂದರ್ಭದಲ್ಲಿ ಮಾಹಿತಿ ಪಡೆದ ಗುತ್ತಿಗಾರಿನ ಅಮರ ಸೇನಾ ಆಂಬುಲೆನ್ಸ್ ವಾಹನದ ಚಾಲಕರಾದ ಮೋಹನ್ ದಾಸ್ ಶಿರಾಜೆ ಮತ್ತು ರಾಜೇಶ್ ಉತ್ರಂಬೆ ತಕ್ಷಣವೇ ಕೆಂಚಪ್ಪ ಅವರನ್ನು ಸುಳ್ಯ ಆಸ್ಪತ್ರೆಗೆ ಯಶಸ್ವಿಯಾಗಿ ತಲುಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!