Ad Widget

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಉದ್ದಂತಡ್ಕ – ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾ ಸಭಾ ಕಾರ್ಯಕ್ರಮವು ಸೆ.18 ರಂದು ದ್ವಾರಕಾ ಸಭಾ ಭವನದಲ್ಲಿ ನಡೆಯಿತು.
ಸಂಘದ ಮಹಾ ಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮಹಾಲಿಂಗನ್ ಬಾಜಿರ್ತೊಟ್ಟಿ, ಶಂಕರ ಪಾಟಾಳಿ ಪರಿವಾರಕಾನ ಅವರು ಮುಖ್ಯ ಅತಿಥಿಗಳಾಗಿದ್ದರು. ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ ಖಜಾಂಜಿ ಗೋಪಾಲಕೃಷ್ಣ ಮೊರಂಗಲ್ಲು ವಾಚಿಸಿದರು. ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ ವಾಚಿಸಿದರು. ನಂತರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಿತು. ದ್ವಿತೀಯ ಪಿ ಯು ಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ತಾಲೂಕಿನಲ್ಲಿಯೇ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ನೀಡಿ ಗೌರವಿಸಲಾಯಿತು. ಅನಾರೋಗ್ಯಕ್ಕೆ ತುತ್ತಾಗಿರುವ ಬಂಧುಗಳಿಗೆ ಆರೋಗ್ಯ ನಿಧಿಯಿಂದ ನಗದು ಮೊತ್ತವನ್ನು ನೀಡಲಾಯಿತು.
2022-23ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು, ನೂತನ ಸಮಿತಿಯ ಅಧ್ಯಕ್ಷರಾಗಿ ಚಂದ್ರಶೇಖರ ಉದ್ದಂತಡ್ಕ , ಕಾರ್ಯದರ್ಶಿಯಾಗಿ ಸುರೇಶ್ ಕರ್ಲಪ್ಪಾಡಿ , ಖಜಾಂಜಿಯಾಗಿ ಗೋಪಾಲಕೃಷ್ಣ ಮೊರಂಗಲ್ಲು , ಉಪಾಧ್ಯಕ್ಷರಾಗಿ ಪೂರ್ಣಿಮಾ ಸೂಂತೋಡು,ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಜಯನಗರ, ಸದಸ್ಯರುಗಳಾಗಿ ಸೀತಾರಾಮ ಕರ್ಲಪ್ಪಾಡಿ, ಅನುರಾಧಾ ಜಾಲ್ಸೂರು, ರಾಧಾಕೃಷ್ಣ ಬೇರ್ಪಡ್ಕ , ನಾರಾಯಣ ಬಂಟ್ರಬೈಲು, ಶಿವಪ್ರಸಾದ್ ಪೇರಾಲು, ಪ್ರದೀಪ್ ಪೆರಾಜೆ, ಪುಷ್ಪಲತಾ ಬೆಟ್ಟಂಪಾಡಿ, ಜಗದೀಶ್ ಮಠ, ಉದಯರವಿ ಕಲ್ಚಾರು, ವಿಜಯ ಎರ್ಮೇಟ್ಟಿ ಅವರನ್ನು ಆಯ್ಕೆ ಮಾಡಲಾಯಿತು ಸಂಘದ ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಾಲಿಂಗನ್ ಬಾಜಿರ್ತೊಟ್ಟಿ ಹಾಗೂ ಕಾನೂನು ಸಲಹೆಗಾರರಾಗಿ ನಾರಾಯಣ ಪಾಟಾಳಿ ಕೆ ನ್ಯಾಯವಾದಿಗಳು ಇವರನ್ನು ನೇಮಿಸಲಾಯಿತು. ಶಂಕರ ಪಾಟಾಳಿ ಪರಿವಾರಕಾನ, ವೆಂಕಟ್ರಮಣ ಬೇರ್ಪಡ್ಕ, ಚಂದ ಕುಡೆಕಲ್ಲು ಇವರನ್ನು ಗೌರವ ಸಲಹೆಗಾರರಾಗಿ ನೇಮಿಸಲಾಯಿತು.
ಹಾಗೂ ಬೈಲುವಾರು ಸಮಿತಿ ಮತ್ತು ಮಹಿಳಾ ಸಮಿತಿಯನ್ನು ರಚಿಸಲಾಯಿತು, ಬೈಲುವಾರು ಸಮಿತಿಯ ಪ್ರಧಾನ ಸಂಚಾಲಕರಾಗಿ ರಮೇಶ್ ಇರಂತಮಜಲು ಇವರನ್ನು ಹಾಗೂ ಮಹಿಳಾ ಸಮಿತಿಯ ಪ್ರಧಾನ ಸಂಚಾಲಕರಾಗಿ ಅನುತಾ ಸುರೇಶ್ ಕರ್ಲಪ್ಪಾಡಿ ಮತ್ತು ಸಹ ಸಂಚಾಲಕರಾಗಿ ಪ್ರೇಮಾಚಂದ ಕುಡೆಕಲ್ಲು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಬೈಲುವಾರು ಸಮಿತಿ ಸಂಯೋಜಕರುಗಳಾಗಿ ಶಂಕರ ಬಡ್ಡಡ್ಕ, ಸಚಿತ್ ಕಲ್ಮಡ್ಕ, ಗಣೇಶ್ ಪರ್ಲಿಕಜೆ, ರವಿರಾಜ್ ಕರ್ಲಪ್ಪಾಡಿ, ರಾಧಾಕೃಷ್ಣ ಅಂಬ್ರೋಟಿ, ಮಾಧವ ಬೆಟ್ಟಂಪಾಡಿ, ನವೀನ್ ಬಿಳಿಯಾರು, ಜನಾರ್ಧನ ನೀರಬಿದಿರೆ, ನಿತೀಶ್ ಎರ್ಮೇಟ್ಟಿ, ಶಶಿಧರ ನೆಲ್ಲಿಕುಂಜೆ, ದಾಮೋದರ ಅಡ್ಕಾರು, ಅನುಪಮಾ ಜಾಲ್ಸೂರು, ಗೋಪಾಲಕೃಷ್ಣ ಕೊಲ್ಲಮೊಗ್ರ, ಕೃಷ್ಣ ಹೊಸೂರು ಇವರನ್ನು ಹಾಗೂ ಸಹ ಸಂಯೋಜಕರಾಗಿ ವಿನೋದ್ ರಾಜ್ , ಸುನಿಲ್ ಶಾಂತಿಮಜಲು, ಸನತ್ ಕಾಂತಮಂಗಲ,ನಾರಾಯಣ ಎಸ್. ಯಂ, ಉಮೇಶ್ ಸರಳಿಕುಂಜ, ವಿಜಯ ಕುಮಾರ್ ಉಬರಡ್ಕ, ರವಿ ಉಬರಡ್ಕ, ಪ್ರದೀಪ್ ಹುಳಿಯಡ್ಕ, ನಾರಾಯಣ ಸಂಕೇಶ, ಅಶ್ವಿತ್ ಅಡ್ಕಾರ್, ಅಂಬಿಕಾ ಜಾಲ್ಸೂರು, ಗಿರಿಧರ ಗುತ್ತಿಗಾರು, ಇವರನ್ನು ಹಾಗೂ ಮಹಿಳಾ ಸಮಿತಿಯ ಸಂಯೋಜಕಿಯರಾಗಿ ಜಯಂತಿ ಕರ್ಲಪ್ಪಾಡಿ, ಸವಿತಾ ಉಬರಡ್ಕ, ಸರಸ್ವತಿ ಐವರ್ನಾಡು, ನಾಗವೇಣಿ ಚಂದ್ರ ಸುಳ್ಯ, ಶಾರದಾ ಪಳ್ಳತ್ತಡ್ಕ, ವಿಶಾಲಾಕ್ಷಿ ಮೊರಂಗಲ್ಲು, ಸತ್ಯ ಗಣೇಶ್ ಅಂಬಟೆಡ್ಕ, ಲತಾ ಸೂಂತೋಡು,ವಿಶಾಲಾ ಕರ್ಲಪ್ಪಾಡಿ,ದಮಯಂತಿ ಕರ್ಲಪ್ಪಾಡಿ, ಶೀಲಾವತಿ ಅಡ್ಕಾರು, ನಯನಾ ಸುರೇಶ್ ಕಾಟಿಪಳ್ಳ, ನಿಶ್ಮಿತಾ ಕಾಂತಮಂಗಲ, ಮಧುಶ್ರೀ ಅರಂಬೂರು, ಸೌಮ್ಯ ಅರಂಬೂರು, ಸೌಮ್ಯಾ ರಮೇಶ್ ಇರಂತಮಜಲು, ಚಂದ್ರಿಕಾ ಲೋಕೇಶ್ ಇರಂತಮಜಲು, ಸರೋಜಿನಿ ಪೈಲಾರು, ಪ್ರೇಮಲತಾ ಉಬರಡ್ಕ ಅವರನ್ನು
ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ಭೋಜ‌ನದ ವ್ಯವಸ್ಥೆ ನಡೆಯಿತು. ಕು.ಧನ್ವಿ ಹಾಗೂ ಕು.ಸಾನ್ವಿ ಪ್ರಾರ್ಥಿಸಿದರು ನಾರಾಯಣ ಬಂಟ್ರಬಯಲು ಸ್ವಾಗತಿಸಿ,ರಮೇಶ್ ಇರಂತಮಜಲು ನಿರೂಪಿಸಿ, ವಂದಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!