Ad Widget

ಹಳೆಗೇಟು : ವಸಂತಕಟ್ಟೆ ವಠಾರದಲ್ಲಿ ಶ್ರೀ ಗಣೇಶೋತ್ಸವದ ಉತ್ಸವಕ್ಕೆ ಚಾಲನೆ

ಹಳೆಗೇಟು ವಸಂತಕಟ್ಟೆ ವಠಾರದಲ್ಲಿ ಆ.31 ರಿಂದ ಸೆ.2 ರ ತನಕ ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘ ರಿ. ಆಶ್ರಯದಲ್ಲಿ ನಡೆಯಲಿರುವ 39 ನೇ ವರ್ಷದ ಗಣೇಶೋತ್ಸವಕ್ಕೆ ಆ.31 ಚಾಲನೆ ನೀಡಿ ಬೆಳಗ್ಗೆ ಪುರೋಹಿತ್ ನಟರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹೋಮ, ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಶಿವನಾಥ್ ರಾವ್, ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಜಿ ಚಿತ್ತರಂಜನ್, ಉಪಾಧ್ಯಕ್ಷ ಬಾಲ ಗೋಪಾಲ ಸೇರ್ಕಜೆ, ಗೌರವಾಧ್ಯಕ್ಷ ಪುಂಡರಿಕ ಭಟ್, ಹಾಗೂ ಸಂಘದ ಸದಸ್ಯರುಗಳು, ಸ್ಥಳೀಯ ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 2ರ ತನಕ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸೆಪ್ಟೆಂಬರ್ 2 ರಂದು ಸಂಜೆ 4 ಗಂಟೆಗೆ ವೈಭವದ ಶೋಭಾ ಯಾತ್ರೆಯ ಮೂಲಕ ಸುಳ್ಯ ನಗರದಾದ್ಯಂತ ಸಾಗಿ ಪಯಶ್ವಿನಿ ನದಿಯಲ್ಲಿ ವಿಸರ್ಜನೆಗೊಳಿಸಿ ಗಣೇಶೋತ್ಸವ ಕಾರ್ಯಕ್ರಮ ಸಮಾರೋಪ ಗೊಳ್ಳಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading