ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಆ.28 ರಂದು ಐವರ್ನಾಡಿನ ಗೆಳೆಯರ ಬಳಗ ದೇರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೆಸರ್ ಡಿ ಒಂಜಿ ದಿನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯ.ಸ.ಸದಸ್ಯರಾದ ಅರ್ಚಕ ಪದ್ಮನಾಭ ಭಟ್ಕೂಟದ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ನಂದಕುಮಾರ ಬಾರೆತ್ತಡ್ಕ ವಹಿಸಿದ್ದರು.
ವೇದಿಕೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಐವರ್ನಾಡು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಸದಸ್ಯರಾದ ದೇವಿದಾಸ ಕತ್ಲಡ್ಕ, ದಾಸಪ್ಪ ಕೋಡ್ತೀಲು, ವಾಮನ ಗೌಡ ಕೋಂದ್ರಮಜಲು, ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರು, ಗೆಳೆಯರ ಬಳಗದ ಗೌರವಾಧ್ಯಕ್ಷ ದೇವಿಪ್ರಸಾದ್ ಎಸ್.ಎನ್.,ಕಾರ್ಯದರ್ಶಿ ಚೇತನ್ ಬೋಳುಗುಡ್ಡೆ, ಗ್ರಾ.ಪಂ.ಸದಸ್ಯೆ ಸುಜಾತ ಪವಿತ್ರಮಜಲು, ಮಾಧವ ಭಟ್ ಶೃಂಗೇರಿ, ರಾಮಚಂದ್ರ ಗೌಡ ಶೇಣಿ, ಮತ್ತಿತರರು ಉಪಸ್ಥಿತರಿದ್ದರು.ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು.
ಪುರುಷರಿಗೆ ಕಬಡ್ಡಿ ಪಂದ್ಯಾಟ, 100 ಮೀ ಓಟ, 3 ಕಾಲಿನ ಓಟ (2 ಜನ)ಮಡಿಕೆ ಒಡೆಯುವುದು,ಸಂಗೀತ ಕುರ್ಚಿ, ಹ್ಯಾಂಡ್ ಬಾಲ್/ವಾಲಿಬಾಲ್ ನಡೆಯಿತು.ಮಹಿಳೆಯರಿಗೆ ಹಗ್ಗಜಗ್ಗಾಟ (5 ಜನರ ತಂಡ) ಹ್ಯಾಂಡ್ಬಾಲ್,100 ಮೀ ಓಟ, ಮಡಿಕೆ ಒಡೆಯುವುದು, ಚಮಚದ ಚಮತ್ಕಾರ,ಸಂಗೀತ ಕುರ್ಚಿ ಸ್ಪರ್ಧೆ ನಡೆಯಿತು. ಮಕ್ಕಳಿಗೆ ಆಟೋಟ ಸ್ಪರ್ಧೆ ಗಳು,ದಂಪತಿಗಳಿಗೆ ಹಾಳೆಯಲ್ಲಿ ಜಾರುಬಂಡಿ,ಉಪ್ಪ ಮುಡಿ ನಡೆಯಿತು.ಗೆಳೆಯರ ಬಳಗದ ಎಲ್ಲಾ ಸದಸ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ್ದರು.
ಅನಿಲ್ ಬಾಂಜಿಕೋಡಿ ಮತ್ತಿತರರು ಕ್ರೀಡಾಕೂಟದ ಕಾರ್ಯಕ್ರಮ ನಿರೂಪಿಸಿದರು.