Ad Widget

ಕುತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಕುತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ಆ.21 ರಂದು ಶಿವಾಜಿ ಯುವಕ ಮಂಡಲ ಕೂತ್ಕುಂಜ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ಪಂಜ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕಲ್ಲಾಜೆ ಉದ್ಘಾಟಿಸಿದರು . ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ವಹಿಸಿದ್ದರು. ಪ್ರಗತಿಪರ ಕೃಷಿಕ ವೆಂಕಟೇಶ್ವರ ಜೋಯಿಸ ಹೆಬ್ಬಾರಹಿತ್ಲು ಉಪನ್ಯಾಸ ನೀಡಿದರು .

. . . . . . .

ದೈಹಿಕ ಶಿಕ್ಷಣ ಶಿಕ್ಷಕ ಸಂದೀಪ್ ಪಲ್ಲೋಡಿ, ಪ್ರಗತಿಪರ ಕೃಷಿಕರು ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ, ಧರ್ಮಪಾಲ ಗೌಡ ಕಕ್ಯಾನ, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗಿಶ್ ಚಿದ್ಗಲ್ಲು, ಕಾರ್ಯದರ್ಶಿ ಶೈಲೇಶ್ ಕುಲ್ಲಾಜೆ, ಕಾರ್ಯಕ್ರಮ ಸಂಯೋಜಕ ಷಣ್ಮುಖ ಕಲ್ಲಾಜೆ ವೇದಿಕೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಚನಾ ಚಿದ್ಗಲ್ಲು ಪ್ರಾರ್ಥಿಸಿ, ಪುನೀತ್ ಚಿದ್ಗಲ್ಲು ಸ್ವಾಗತಿಸಿದರು. ಷಣ್ಮುಖ ಕಲ್ಲಾಜೆ ವಂದಿಸಿ, ಷಣ್ಮುಖ ಹೊಸೊಕ್ಲು ನಿರೂಪಿಸಿದರು.

ಬಳಿಕ ಮೊಸರು ಕುಡಿಕೆ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಜರುಗಿದವು.

ಸಮರೋಪ ಕಾರ್ಯಕ್ರಮ

ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪ್ರಗತಿಪುರ ಕೃಷಿಕ ಭವಾನಿ ಶಂಕರ ದೇರಪ್ಪಜನ ಮನೆ, ಉದ್ಯಮಿ ರಾಧಾಕೃಷ್ಣ ಪೈಸಾರಿ, ಶ್ರೀಮತಿ ವಿಮಲಾ ಉದಯಕುಮಾರ್‌ ಚಿದ್ಗಲ್ಲು, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗೀಶ್‌ ಚಿದ್ಗಲ್ಲು , ಕಾರ್ಯಕ್ರಮ ಸಂಯೋಜಕ ಷಣ್ಮುಖ ಕಲ್ಲಾಜೆ ವೇದಿಕೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆದಿತ್ಯ ಛಾಯಾಗ್ರಾಹಕರಿಗೆ ಪ್ರಶಸ್ತಿ ನೀಡಿ ಗೌರವಿಸಿ, ಷಣ್ಮುಖ ಹೊಸಕೊಕ್ಲು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading