Ad Widget

ಸರಕಾರಿ ಪ್ರೌಢಶಾಲೆ ಎಣ್ಮೂರು: ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಮತ್ತು ನೂತನ ಶೌಚಾಲಯ ಉದ್ಘಾಟನೆ

ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ SDMC ಕಾರ್ಯಾಧ್ಯಕ್ಷ ಶ್ರೀ ಪದ್ಮನಾಭ ಗೌಡ ಪೂದೆ ಧ್ವಜಾರೋಹಣ ನೆರವೇರಿಸಿದರು.

. . . . . . . . .

ದಕ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ನೀಡಲಾದ ಬಾಲಕರ ನೂತನ ಶೌಚಾಲಯವನ್ನು ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರಿ ಜಾನಕಿ ಮುರುಳ್ಯ ಉದ್ಘಾಟಿಸಿ, ವಿದ್ಯಾರ್ಥಿಗಳು ದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೇಶ ಸೇವೆ ಮಾಡಲು ಕರೆ ನೀಡಿದರು.

. . . . . . .

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಮತ್ತು ಪೋಷಕ ಭಾಗವಹಿಸುವಿಕೆ ಯಲ್ಲಿ ನಡೆದ ನಗರ ಮೆರವಣಿಗೆಯು ಮನಮೋಹಕವಾಗಿತ್ತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವನಿತಾಸುವರ್ಣ ಸದಸ್ಯರಾದ ಶ್ರೀ ಕರುಣಾಕರ ಗೌಡ ಹುದೇರಿ. ಶ್ರೀಮತಿ ಪುಷ್ಪಲತಾ ಶ್ರೀಮತಿ ಶೀಲಾ ಗೋಳ್ತಿಲ, ಮತ್ತು SDMC ಸದಸ್ಯರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಸ್ವಾಗತಿಸಿ, ಗಣಿತ ಶಿಕ್ಷಕರಾದ ಶ್ರೀ ಸಂತೋಷ್ ವಂದಿಸಿದರು. ಶಿಕ್ಷಕಿ ಉಷಾ.ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಧ್ಯಾಹ್ನ ಸಿಹಿಯೂಟ ನೀಡಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading