
ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಸುಬ್ರಹ್ಮಣ್ಯ ಪಂಚಾಯತ್ ವ್ಯಾಪ್ತಿಯ ಯೇನೆಕಲ್ಲುನ ಬಾನಡ್ಕ-ಬೋಳಡ್ಕ ಪಂಚಾಯತ್ ರಸ್ತೆಗೆ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸೈನಿಕ ರಸ್ತೆ ಎಂದು ನಾಮಕರಣ ಮಾಡಲಾಯಿತು.ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ ಚೆರಿಯನ್ ರಸ್ತೆ ನಾಮಕರಣ ಫಲಕವನ್ನು ಅನಾವರಣಗೊಳಿಸಿದರು.ಈ ಮೂಲಕ ಬಾನಡ್ಕ-ಬೋಳಡ್ಕ ರಸ್ತೆಯು ಅಧಿಕೃತವಾಗಿ ಸೈನಿಕ ರಸ್ತೆ ಎಂದು ಉಲ್ಲೇಖಿತವಾಯಿತು. ಗ್ರಾಮೀಣ ಭಾಗದ ರಸ್ತೆಗೆ ಸೈನಿಕ ರಸ್ತೆ ಎಂದು ನಾಮಕರಣ ಮಾಡಿರುವುದು ಎಲ್ಲಾ ಸೈನಿಕರಿಗೆ ಮತ್ತು ನಿವೃತ್ತ ಸೈನಿಕರಿಗೆ ನೀಡಿದ ಗೌರವವಾಗಿದೆ.ಮುಂದೆ ಈ ರಸ್ತೆಯು ಸಮಗ್ರ ಅಭಿವೃದ್ಧಿ ಯಾಗಲಿ.ಗ್ರಾಮೀಣ ಭಾಗದಲ್ಲಿ ರಸ್ತೆ ನಾಮಕರಣ ಮೂಲಕ ಸೈನಿಕರಿಗೆ ಗೌರವ ನೀಡುವ ಕಾರ್ಯವು ದೇಶದಲ್ಲಿ ಮಾದರಿಯಾಗಿ ಪರಿಣಮಿಸಿದೆ ಎಂದು ನಾಮ ಫಲಕ ಅನಾವರಣಗೊಳಿಸಿದ ನಿವೃತ್ತ ಸೈನಿಕ ಸಂಘದ ಅಧ್ಯಕ್ಷ ಜೆ.ಪಿ.ಎಂ.ಚೆರಿಯನ್ ಹೇಳಿದರು.ಈ ಸಂದರ್ಭ ಗ್ರಾ.ಪಂ .ಅಧ್ಯಕ್ಷೆ ಲಲಿತಾ.ಜಿ.ಗುಂಡಡ್ಕ, ನಾಮ ಫಲಕ ದಾನಿಗಳಾದ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಸುದರ್ಶನ ಜೋಯೀಸ,ಪಿಡಿಒ ಯು.ಡಿ.ಶೇಖರ್,ಕಾರ್ಯದರ್ಶಿ ಮೋನಪ್ಪ.ಡಿ, ನಿವೃತ್ತ ಸೈನಿಕರಾದ ವಾಸುದೇವ ಬಾನಡ್ಕ, ಭವಾನಿಶಂಕರ ಪೂಂಬಾಡಿ, ಉದ್ಯೋಗ ಖಾತರಿ ಯೋಜನೆಯ ಸಂಯೋಜಕ ಭರತ್, ಮಾಜಿ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್ ಎಸ್, ಮಾಜಿ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ ಸೇರಿದಂತೆ ಪಂಚಾಯತ್ ಸದಸ್ಯರು, ನಿವೃತ್ತ ಯೋಧರು, ಸಾರ್ವಜನಿಕರು ಉಪಸ್ಥಿತರಿದ್ದರು