ಅಜ್ಜಾವರ: ಆಟಿ ಆಚರಣೆ ಕಾರ್ಯಕ್ರಮ.

ಅಜ್ಜಾವರದ ಧನಲಕ್ಷ್ಮೀ ಮಹಿಳಾ ಮಂಡಲದ ಆಶ್ರಯದಲ್ಲಿ ಇತ್ತೀಚೆಗೆ ಆಟಿ ಆಚರಣೆ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಅಜ್ಞಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ ಬಸವನಪಾದೆ ರವರು ಚೆನ್ನಮಣೆ ಆಡುವುದರ ಮೂಲಕ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಧನಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿಭಟ್ ವಹಿಸಿದ್ದರು.

. . . . . . . . .

ವೇದಿಕೆಯಲ್ಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿ ಎ ಭಾಸ್ಕರ ರಾವ್ ಬಯಂಬು, ಧನಲಕ್ಷ್ಮಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಶ್ವೇತಾ ಪುರುಷೋತ್ತಮ, ಸ್ಥಾಪಕಾಧ್ಯಕ್ಷೆ ಶ್ರೀಮತಿ ಜಯಂತಿ ಜನಾರ್ಧನ , ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ವಿಶಾಲಕ್ಷಿ ಕಲ್ಲಡ್ಕ, ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ ಉಪಸ್ಥಿತರಿದ್ದರು. ಆಟಿ ಆಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

. . . . . . .

ಶ್ರೀಮತಿ ವಿಮಲಾ ಅರುಣ ಪಡ್ಡಂಬೈಲು ಅವರು ಸ್ವಾಗತಿಸಿ, ಶ್ರೀಮತಿ ಕವಿತಾ ಪುರುಷೋತ್ತಮ ವಂದಿಸಿದರು. ಶ್ರೀಮತಿ ಸೀತಾಲಕ್ಷ್ಮಿರವರು ಪ್ರಾರ್ಥಿಸಿ, ವಿಶಾಲ ಕರ್ಲ ಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading