- Friday
- November 1st, 2024
ಭಾರೀ ಮಳೆ ಹಾನಿಗೊಳಗಾದ ಘಟನಾ ಸ್ಥಳಗಳಿಗೆ ಸಚಿವ ಎಸ್.ಅಂಗಾರ ಆ.02 ರಂದು ಭೇಟಿ ನೀಡಿದರು. ಹರಿಹರ ಪಲ್ಲತ್ತಡ್ಕ ಗ್ರಾಮದ ಹರಿಹರ ಪೇಟೆಯಲ್ಲಿ ಭಾರೀ ಹಾನಿ ಸಂಭವಿಸಿದ್ದು, ಘಟನಾ ಸ್ಥಳದಲ್ಲಿ ಜನಸ್ತೋಮವೇ ಸೇರಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಅಂಗಾರ “ಮಳೆಯಿಂದ ಉಂಟಾದ ಹಾನಿಗಳ ಬಗ್ಗೆ ಮಾಹಿತಿ ಪಡೆದ ಕೂಡಲೇ ಆಗಮಿಸಿದ್ದೇನೆ. ರಾತ್ರಿ ಸುಬ್ರಹ್ಮಣ್ಯಕ್ಕೆ ಭೇಟಿ...
ಸುಬ್ರಹ್ಮಣ್ಯ : ಆ.01 ರಂದು ರಾತ್ರಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಘಟನಾ ಸ್ಥಳಕ್ಕೆ ಆ.02 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಭೇಟಿ ನೀಡಿದರು. ಅಧಿಕಾರಿಗಳು, ಸ್ಥಳೀಯಾಡಳಿತದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪುತ್ತೂರು ಎ.ಸಿ ಗಿರೀಶ್ ನಂದನ್, ತಹಶೀಲ್ದಾರ್ ಅನಂತ ಶಂಕರ್, ಕಂದಾಯ ನಿರೀಕ್ಷಕ ಅವಿನ್...
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಪೊಲೀಸರು ಇನ್ನೆರಡು ಆರೋಪಿಗಳನ್ನು ಆ.2 ರಂದು ಬಂಧಿಸಿದ್ದಾರೆ. ಬೆಳ್ಳಾರೆ ಪಲ್ಲಿಮಜಲು ನಿವಾಸಿಗಳಾದ ಸದ್ದಾಂ(32ವ) ಹಾರಿಸ್(42ವ) ರವರು ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಅವರನ್ನು ಜು.28 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಪೊಲೀಸರು ಆರೋಪಿಗಳ...
ಆ.01 ರಂದು ಸುರಿದ ಭಾರಿ ಮಳೆಗೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ, ಕಲ್ಮಕಾರು, ಕೊಲ್ಲಮೊಗ್ರು ಭಾಗದ ಅನೇಕ ಕಡೆಗಳಲ್ಲಿ ಜಲಾವೃತವಾಗಿದ್ದು, ಅಪಾರ ಪ್ರಮಾಣದ ನೀರು ನುಗ್ಗಿ ಹರಿಹರ ಪಲ್ಲತ್ತಡ್ಕದಲ್ಲಿ ಸೇತುವೆ ಹಾಗೂ ರಸ್ತೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದ್ದು, ಕೆಲ ಅಂಗಡಿಗಳ ಮಣ್ಣು ಸವೆದು ಅಂಗಡಿಗಳು ಅಪಾಯಕ್ಕೆ ಸಿಲುಕಿವೆ ಹಾಗೂ ಕೆಲ ಮನೆಗಳಿಗೂ ನೀರು ನುಗ್ಗಿದೆ ಎಂದು...
ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮಣ್ಣಲ್ಲಿ ಹೂತು ಹೋಗಿರುವ ಘಟನೆ ಸುಬ್ರಹ್ಮಣ್ಯದ ಕುಮಾರಧಾರ ಸಮೀಪ ನಡೆದಿದೆ. ಕುಸುಮಾಧರ ಎಂಬವರ ಮನೆ ಕುಸಿತವಾಗಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣುಪಾಲಾಗಿದ್ದಾರೆ. ಸದ್ಯ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು, ಜೆಸಿಬಿ ತರಿಸಿ ಮೃತದೇಹಗಳನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ. ಆದರೆ ಕುಮಾರಧಾರದಿಂದ ಪಂಜ ಕಡೆಗೆ ಹೋಗುವ ರಸ್ತೆ...
ಭಾರಿ ಮಳೆಗೆ ಕೊಚ್ಚಿ ಬಂದ ಮರದ ದಿಮ್ಮಿಗಳು ಸೇತುವೆಗೆ ಸಿಲುಕಿ ನೀರು ತುಂಬಿ ರಸ್ತೆಯಲ್ಲೆಲ್ಲಾ ಹರಿದು ವ್ಯಾಪಕ ಹಾನಿ ಸಂಭವಿಸಿದೆ. ಹೊಳೆ ಬದಿಯಲ್ಲಿದ್ದ ಅಂಗಡಿಗಳಿಗೆ ಹಾನಿಯಾಗಿದ್ದು, ರಸ್ತೆ ಕೂಡ ಕೊಚ್ಚಿ ಹೋಗಿತ್ತು. ಅಗ್ನಿಶಾಮಕ ಹಾಗೂ ಊರವರ ಸಹಕಾರದಿಂದ ಮರದ ದಿಮ್ಮಿಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಮಳೆ ಪುನಃ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಮರ ತೆರವುಗೊಳಿಸಿ...
ಆ.01 ರಂದು ಸುರಿದ ಭಾರಿ ಮಳೆಗೆ ತಡ ರಾತ್ರಿ 11:00 ಗಂಟೆಯ ಸುಮಾರಿಗೆ ಕಲ್ಮಕಾರು ಗ್ರಾಮದ ಗಡಿಕಲ್ಲು ಗಿರಿಯಪ್ಪ ಗೌಡ ಕೋನಡ್ಕ ಎಂಬುವವರ ಮನೆಯ ಹಿಂದಿನ ಬರೆ ಕುಸಿದಿದೆ ಎಂದು ತಿಳಿದುಬಂದಿದೆ. ವರದಿ :- ಉಲ್ಲಾಸ್ ಕಜ್ಜೋಡಿ
ನಾಗರ ಪಂಚಮಿ ಪ್ರಯುಕ್ತ ಜೋತ್ಸ್ನಾ ಪಾಲೆಪ್ಪಾಡಿ ಯವರ ಜಾಗದಲ್ಲಿರುವ ನಾಗದೇವರಿಗೆ ಹಾಲೆರೆದು ಆರಾಧನೆ ಮಾಡಲಾಯಿತು.ಈ ಸಂದರ್ಭದಲ್ಲಿ ಪಾಲೆಪ್ಪಾಡಿ ಬೈಲಿನ ಸಮಸ್ತ ಭಕ್ತಾದಿಗಳು ನಾಗದೇವರಿಗೆ ಹಾಲು,ಸಿಯಾಳ ಅಭಿಷೇಕ ಮಾಡಿದರು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಅಂಗವಾಗಿ ಹಾಲು,ಸಿಯಾಳ ಅಭಿಷೇಕ, ಆಶ್ಲೇಷ ಪೂಜೆ ನಡೆಯಿತು.
ಸುಬ್ರಹ್ಮಣ್ಯದಲ್ಲಿ ಆ.1 ರಂದು ಸಂಜೆಯಿಂದ ಸುರಿದ ಮಳೆಯಿಂದ ಕುಮಾರಧಾರ ಸಮೀಪದ ಏನೆಕಲ್ಲು ತೆರಳುವ ರಸ್ತೆಯ ಪರ್ವತಮುಖಿ ಎಂಬಲ್ಲಿ ಗುಡ್ಡ ಜರಿದು ಮನೆ ಕುಸಿತವಾಗಿ ಇಬ್ಬರು ಬಾಲಕಿಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ರಾತ್ರಿ ಸುಮಾರು 7.30ರ ವೇಳೆಗೆ ಕುಸಿತ ಸಂಭವಿಸಿತ್ತು. ಮಣ್ಣಿನಡಿಗೆ ಇಬ್ಬರು ಮಕ್ಕಳು ಸಿಲುಕಿರುವುದು ಗೊತ್ತಾಗಿ ರಾತ್ರಿ 10.30ರ ವರೆಗೆ ಕಾರ್ಯಚರಣೆ...
Loading posts...
All posts loaded
No more posts