- Thursday
- November 21st, 2024
ವಿಪರೀತ ಮಳೆ ಹಾಗೂ ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಸುಳ್ಯ ಹಾಗು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗು ಕಾಲೇಜುಗಳಿಗೆ ಆ.03 ರಂದು ರಜೆ ಘೋಷಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಮಾಡಿದ್ದಾರೆ.
ಹರಿಹರಪಲ್ಲತಡ್ಕದ ಸೇತುವೆಗೆ ಪವಾಹದಲ್ಲಿ ಬಂದಿದ್ದ ಮರದ ದಿಮ್ಮಿಗಳು ಸಿಕ್ಕಿಹಾಕಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು. ಈ ಮರಗಳು ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ಎಂಬವರು ನದಿಗೆ ಬಿದ್ದಿದ್ದು ಅವರನ್ನು ರಕ್ಷಿಸಿದ ಘಟನೆ ಇಂದು ನಡೆದಿದೆ. ಅಪರೇಟರ್ ನೀರಿಗೆ ಬಿದ್ದ ತಕ್ಷಣ ಸೋಮಶೇಖರ್ ಕಟ್ಟೆಮನೆ ಎಂಬವರು ನೀರಿಗೆ ಅವರನ್ನು ರಕ್ಷಿಸಿದರು. ಸ್ಥಳೀಯರ ಸಹಕಾರದಿಂದ ಅವರನ್ನು...
ಹರಿಹರಪಲ್ಲತಡ್ಕದ ಸೇತುವೆಗೆ ಪವಾಹದಲ್ಲಿ ಬಂದಿದ್ದ ಮರದ ದಿಮ್ಮಿಗಳು ಸಿಕ್ಕಿಹಾಕಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು. ಈ ಮರಗಳು ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ಎಂಬವರು ನದಿಗೆ ಬಿದ್ದಿದ್ದು ಅವರನ್ನು ರಕ್ಷಿಸಿದ ಘಟನೆ ಇಂದು ನಡೆದಿದೆ. ಅಪರೇಟರ್ ನೀರಿಗೆ ಬಿದ್ದ ತಕ್ಷಣ ಸೋಮಶೇಖರ್ ಕಟ್ಟೆಮನೆ ಎಂಬವರು ನೀರಿಗೆ ಅವರನ್ನು ರಕ್ಷಿಸಿದರು. ಸ್ಥಳೀಯರ ಸಹಕಾರದಿಂದ ಅವರನ್ನು...
ದ.ಕ ಜಿಲ್ಲೆ ಉಸ್ತುವಾರಿ ಸಚಿವ, ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಅವರು ನಾಳೆ (ಆ.3 ) ಬೆಳಗ್ಗೆ 9.30ಕ್ಕೆ ಸುಬ್ರಹ್ಮಣ್ಯ ಆಗಮಿಸಿ ಅಲ್ಲಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ ಹರಿಹರ, ಕೊಲ್ಲಮೊಗ್ರು ಕಲ್ಮಕಾರು ಈ ಭಾಗಕ್ಕೆ ಭೇಟಿ ನೀಡಲಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಇಂದು ಸಂಸತ್ತಿನಲ್ಲಿ ಭೇಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರು ನಮ್ಮ ಕಾರ್ಯಕರ್ತ ಶ್ರೀ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಕೇಸನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದುದಕ್ಕಾಗಿ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಕೇರಳದ ಗಡಿಪ್ರದೇಶವಾದ ಕರಾವಳಿ ಪ್ರದೇಶಗಳಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗಿದ್ದು,...
ಸುಬ್ರಹ್ಮಣ್ಯದಲ್ಲಿ ಆ.1 ರಂದು ನಡೆದ ಭೂಕುಸಿತದಿಂದಾಗಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರೂ.11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರ ಆ. 2 ರಂದು ಕುಸುಮಾಧರಿಗೆ ಕುಸುಮಾಧರರ ತಂದೆ ಬೊಮ್ಮಣ ಗೌಡ ಕರಿಮಜಲುರವರ ನಿವಾಸದಲ್ಲಿ ವಿತರಿಸಿದರು. ಮೃತಪಟ್ಟ ಇಬ್ಬರು ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ ಮನೆ...
ಮಡಪ್ಪಾಡಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ "ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ" ಕಾರ್ಯಕ್ರಮಕ್ಕೆ ಜು.31 ರಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಡಪ್ಪಾಡಿ ಶಾಲಾ ವಿದ್ಯಾರ್ಥಿಗಳು ಸ್ಪರ್ಧಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು,ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.
ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ನಡೆಸುವ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ಪ್ರತಿಭಾ ಕಾರಂಜಿಯ ಶಾಲಾ ಮಟ್ಟದ ಸ್ಪರ್ಧೆಯು ಸರಕಾರಿ ಪ್ರೌಢ ಶಾಲೆ ಎಣ್ಮೂರಿನಲ್ಲಿ ಇಂದು ಜರುಗಿತು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಇವರು ಸ್ಪರ್ಧೆಯ ಕ್ರಮ ಸಂಖ್ಯೆ ಎತ್ತುವುದರ ಮೂಲಕ ಉದ್ಘಾಟಿಸಿ, ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ...
ಪಣಿಯಾಲ ಬೈಲಿನ ಬಾಳಿಕಳ ಬೂಡು ಉಳ್ಳಾಕುಲು ಸಂಬಂಧಿತ ನಾಗ ಸನ್ನಿಧಿಯಲ್ಲಿ ಆ.2 ರಂದು ನಾಗರ ಪಂಚಮಿಯ ಪ್ರಯುಕ್ತ ನಾಗ ತಂಬಿಲ ಹಾಗೂ ಹಾಲಾಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರಾದ ಭವಾನಿ ಶಂಕರ ಗೌಡ ಬಾಳಿಕಳ ಹಾಗೂ ಪಣಿಯಾಲ ಬೈಲಿನ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.ವೈದಿಕ ಕಾರ್ಯಗಳನ್ನು ವೇದಮೂರ್ತಿ ಶ್ರೀ ಮುರಳಿ ಕೃಷ್ಣ ಭಟ್ ವಳಲಂಬೆ ನೆರವೇರಿಸಿದರು.
Loading posts...
All posts loaded
No more posts