Ad Widget

ಸಂಪಾಜೆ: ಪಂಚಾಯತ್ ಸಾಮಾನ್ಯ ಸಭೆ

ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಸಭೆಯಲ್ಲಿ ಭೂಕಂಪ ಸಂದರ್ಭದಲ್ಲಿ ಹಾನಿಯದ ಮನೆಗಳಿಗೆ ಪರಿಹಾರ ಸಿಗದಿರುವ ಹಾಗೂ ಬೆಂಕಿ ಅವಘಡ ಆದಾಗ ಪರಿಹಾರ ನೀಡದಿರುವುದನ್ನು ಸದಸ್ಯರುಗಳು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ತುರ್ತು ಪರಿಹಾರ ನೀಡುವಂತೆ ಕೊಡಲಾಯಿತು.

. . . . . . .

ಸ್ವಾತಂತ್ರೋತ್ಸವದ ದಿನ ಪ್ರತಿಯೊಂದು ಮನೆಗೆ ಧ್ವಜ ಹಂಚಲು ಸಂಜೀವಿನಿ ಒಕ್ಕೂಟದ ಮೂಲಕ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು. ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಸಲು ತೀರ್ಮಾನಿಸಲಾಯಿತು. ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಪರಿಶೀಲನೆ ಮಾಡಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಸದಸ್ಯರುಗಳಾದ ಜಗದೀಶ್ ರೈ, ಎಸ್. ಕೆ. ಹನೀಫ್, ಸುಂದರಿ ಮುಂಡಡ್ಕ ಸುಮತಿ ಶಕ್ತಿವೇಲು, ಸವಾದ್, ವಿಜಯ ಕುಮಾರ್, ರಜನಿ ಅನುಪಮಾ, ಸುಶೀಲ, ಅಬೂಸಾಲಿ ಗೂನಡ್ಕ, ವಿಮಲಾ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!