- Tuesday
- November 26th, 2024
ಕಾಣಿಯೂರು ಬಳಿಯ ಬೈತಡ್ಕ ಮಸೀದಿ ಬಳಿಯ ಸೇತುವೆಯಿಂದ ಕೆಳಗೆ ಬಿದ್ದ ಕಾರು ತೆರವು ಕಾರ್ಯಾಚರಣೆ ನಡೆದಿದೆ. ಆದರೆ ಕಾರಿನಲ್ಲಿ ಯಾರೊಬ್ಬರೂ ಪತ್ತೆಯಾಗಿಲ್ಲ. ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ ಮೂರು ಮಂದಿ ಇದ್ದರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ವಿಟ್ಲ ಮೂಲದ ಕುಂಡಡ್ಕದವರು ಎಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ. ಕಾರಿನಲ್ಲಿ ಮೂವರಿದ್ದಾರೆಂದು...
https://youtu.be/FxbBJwsGv0c ಕಳೆದ ತಡರಾತ್ರಿ(ಜು.9) ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದ ಪಾಲ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ದ್ವೀಪ ವಾಸಿಗಳಾಗಿದ್ದಾರೆ. ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ...
ಸುಳ್ಯ ತಾಲೂಕು ಹಾಗುಇ ಕೊಡಗು ಗಡಿ ಭಾಗಗಳಲ್ಲಿ ಇಂದು ಬೆಳಿಗ್ಗೆ 6.22 ಕ್ಕೆ ಸಂಭವಿಸಿದ ಲಘು ಭೂಕಂಪದ ಕೇಂದ್ರ ಅರಂತೋಡು ಎಂದು ತಿಳಿದುಬಂದಿದೆ. ಬೆಳಿಗ್ಗೆ 6.22 ಕ್ಕೆ ಕಂಪನವಾಗಿದೆ. ಅರಂತೋಡು ಗ್ರಾಮದ 1.1 ಕಿ.ಮೀ. ಪರಿಸರದಲ್ಲಿ 10 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ. 1.8 ತೀವ್ರತೆ ಇತ್ತು ಎಂದು ರಿಕ್ಟರ್ ಮಾಪಕದ ಅಂಕಿ ಅಂಶಗಳ ಪ್ರಕಾರ...
ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಳಿ ಮತ್ತು ಯುವಕ ಮಂಡಲ ಇವುಗಳ ಆಶ್ರಯದಲ್ಲಿ ಜು.8 ಅಭಿನಂದನಾ ಕಾರ್ಯಕ್ರಮವು ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಶಾಲೆಯ ಕಾರ್ಯಾಚಟುವಟಿಕೆಗಳಿಗೆ ತೊಂದರೆ ಉಂಟಾಗುವುದುದನ್ನು ಮನಗಂಡ ಮಡಪ್ಪಾಡಿಯ ಯುವಕ ಮಂಡಲ ಹಾಗೂ ಶ್ರೀ ರಾಮ ಭಜನಾ ಮಂಡಳಿ ಇದರ ಸದಸ್ಯರು ತಾವೇ ಸ್ವತಃ ಹಣ...
ಸ್ವಾತಂತ್ರ್ಯೋತ್ಸವದ ೭೫ ನೇ ವರ್ಷಾಚರಣೆಯ ಅಂಗವಾಗಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಹರ್ ಘರ್ ಝಂಡಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಗ್ರಾಮದಲ್ಲಿ ನಡೆಸುವುದು ನಮ್ಮ ಗುರಿಯಾಗಬೇಕು.ಗ್ರಾಮದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಅರಳಲು ಸರ್ವರ ಸಹಕಾರ ಅತ್ಯಗತ್ಯ. ೭೫ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಘರ್ ಘರ್ ಝಂಡಾ ಎಂಬ ಕಾರ್ಯಕ್ರಮವು ನೆರವೇರಲಿದೆ.ಈ ನಿಮಿತ್ತ ಸುಬ್ರಹ್ಮಣ್ಯ...
ಸಂಪಾಜೆ ಭೂಕಂಪ ಪೀಡಿತ ಪ್ರದೇಶಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಜು.9 ರಂದು ಭೇಟಿ ನೀಡಿತು. ಈ ತಂಡದಲ್ಲಿ ಜಿಯೋಲೋಜಿಕಲ್ ಸರ್ವೆ ಆಫ್ ಇಂಡಿಯಾದ ರಾಹುಲ್, ಡಾ. ಶ್ರೀ ನಿವಾಸ್ ರೆಡ್ಡಿ ಜಗದೀಶ್ ರವರು ನಾಗೇಶ್ ಪಿ. ಆರ್, ಅಬೂಸಾಲಿ ಪಿ. ಕೆ., ಸರೋಜ ರವರ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ...
ನಿಂತಿಕಲ್ಲಿನ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ಕಡೀರ ಭುವನೇಶ್ ರವರ ಮಾಲಕತ್ವದಲ್ಲಿ ಅಕ್ಷಯ ಮೊಬೈಲ್ ಸೇಲ್ ಸರ್ವಿಸಸ್ ಮತ್ತು ಆ್ಯಕ್ಸಸರೀಸ್ ಜುಲೈ 11 ರಂದು ಶುಭಾರಂಭಗೊಳ್ಳಲಿದೆ. ಐಫೋನ್, ಸ್ಯಾಮ್ಸಾಂಗ್, ವಿವೋ, ಒಪ್ಪೊ, ನೋಕಿಯಾ, ಐಟೇಲ್, ಲಾವ, ಎಂ.ಐ, ರಿಯಲ್ ಮಿ, ಹಾಗೂ ಸ್ಮಾರ್ಟ್ ಫೋನ್ ಮತ್ತು ಮೊಬೈಲ್ ಫೋನ್ ಕವರ್, ಇಯರ್ ಫೋನ್, ಮೆಮೊರಿ ಕಾರ್ಡ್, ಚಾರ್ಜರ್...
ಬೆಳ್ಳಾರೆ ಮೆಸ್ಕಾಂ ಶಾಖೆಯ ಐವರ್ನಾಡು ವ್ಯಾಪ್ತಿಯಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನವೀನ್ ಎಂ. ಅವರಿಗೆ ಮೆಸ್ಕಾಂ ಜೆ.ಇ. ಆಗಿ ಮುಂಭಡ್ತಿ ದೊರೆತಿದೆ. ಅವರು ಮಂಗಳೂರಿನ ಕುಲಶೇಖರ ಸೇವಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಬೆಳ್ಳಾರೆಯಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಚಾಮನಗರದವರು.
ಜು.07 ರಂದು ಸುಳ್ಯ ಪೇಟೆಯಲ್ಲಿ ಶಿವರಾಮ ಮಡಪ್ಪಾಡಿ ಎಂಬುವವರ ಪರ್ಸ್ ಕಳೆದು ಹೋಗಿದ್ದು, ಪರ್ಸ್ ನಲ್ಲಿ ಎ.ಟಿ.ಎಂ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳು ಇದ್ದು, ಪರ್ಸ್ ಸಿಕ್ಕಿದವರು 6363169642 ನಂಬರ್ ಗೆ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.
ಕೊಲ್ಲಮೊಗ್ರು ಗ್ರಾಮದ ವೇದಾವತಿ ತೋಟದಮಜಲು ಎಂಬುವವರ ಕೊಟ್ಟಿಗೆಯ ಛಾವಣಿ ಜು.06 ರಂದು ಭಾರೀ ಮಳೆಗೆ ಮುರಿದು ಹೋಗಿದ್ದು, ಮನೆಯವರು ಸೇವಾ ಪ್ರತಿನಿಧಿ ಮುಖಾಂತರ ವಿಪತ್ತು ನಿರ್ವಹಣಾ ಘಟಕಕ್ಕೆ ಮಾಹಿತಿ ನೀಡಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜು.08 ರಂದು ಮುರಿದು ಹೋಗಿದ್ದ ಕೊಟ್ಟಿಗೆಯ ಛಾವಣಿಯನ್ನು ಸರಿಪಡಿಸಿ ಪ್ಲಾಸ್ಟಿಕ್ ಹೊದಿಸಿ ದುರಸ್ತಿಪಡಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ...
Loading posts...
All posts loaded
No more posts