
ರಾಜ್ಯದ್ಯಾಂತ ನಡೆಯುತ್ತಿರುವ ಹಿಂದೂ ಸಂಘಟನೆಯ ಸದಸ್ಯರ ಹತ್ಯೆ ಹಾಗೂ ಬೆಳ್ಳಾರೆ ಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಕೊಲೆ ನಡೆದಿದ್ದರೂ ಪಕ್ಷಕ್ಕಿಂತ ಹಿಂದುತ್ವ ಮುಖ್ಯ ಇನ್ನೆಷ್ಟು ಹೆಣಗಳು ಬೇಕು ಸಾಮಾನ್ಯ ಕಾರ್ಯಕರ್ತರದ್ದು ಇಂದು ಪ್ರವೀಣ್ ನೆಟ್ಟಾರು ನಾಳೆ ನಾವು ಇಷ್ಟೇ ಜೀವನ, ಇಂದು ಪ್ರವೀಣ್ ಅಣ್ಣನಿಗೆ ಬಂದ ಪರಿಸ್ಥಿತಿ ನಮಗೆ ಬರುವುದು ಬೇಡ, ಕರ್ನಾಟಕ ಬಿಜೆಪಿಯ ಬೊಗಳೆ ರಾಜಕಾರಣಿಗಳಿಂದ ಕಠಿಣ ಕ್ರಮ ಎಂಬ ಮಾತು ಮಾತ್ರ. ಇಂತಹ ವರ್ತನೆಗೆ ಮನನೊಂದು ನಾನು ಕೂಡ ಮಡಪ್ಪಾಡಿ ಬಿಜೆಪಿಯ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಘೋಷಿಸುತ್ತಿದ್ದೇನೆ ಹಾಗೂ ನಮ್ಮ ಮನೆಯಲ್ಲಿ ಸಚಿವರು ಬಂದು ಅಳವಡಿಸಿದ ನಾಮಫಲಕವನ್ನೂ ತೆಗೆಯುತ್ತೇನೆ ಎಂದು ಧನ್ಯಕುಮಾರ್ ದೇರುಮಜಲು ಅವರು ಅಮರ ಸುದ್ದಿಗೆ ತಿಳಿಸಿದ್ದಾರೆ.