ಬ್ಲಾಕ್ ಕಾಂಗ್ರೆಸ್ ವತಿಯಿಂದ ಜು.30ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಧನಂಜಯ ಅಡ್ಪಂಗಾಯ ಮಾತನಾಡಿ, ಬೆಳ್ಳಾರೆಯು ಸುಳ್ಯ ತಾಲೂಕಿಗೆ ಇಂದು ಕಪ್ಪು ಚುಕ್ಕಿ ತಂದಿದೆ. ಧರ್ಮದ ಹೆಸರಿನಲ್ಲಿ, ರಾಜ್ಯ ಧರ್ಮದ ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಚುನಾವಣಾ ಭಾಷಣಗಳು ಮತ್ತು ಪ್ರಚೋದನೆ ಭಾಷಣ ಬದಲಿಗೆ ದೇಶದ ಅಭಿವೃದ್ಧಿಯ ಭಾಷಣ ನಡೆದರೆ ಇಂತಹ ಕೊಲೆ ನಡೆಯುವುದು ಕಡಿಮೆಯಾಗಬಹುದು.ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡಿದೆ ಹಾಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡುವುದೆಂದರೆ ಯಾವುದೇ ಅಹಿತಕರ ಘಟನೆ ಬಂದಾಗ ಪೋಲೀಸ್ ಠಾಣೆಗೆ ದೂರು ನೀಡಿ ಸಮಾಜದ ಮೂಲಕ ನ್ಯಾಯ ಪಡೆದುಕೊಳ್ಳಬೇಕು. ಆದುದರಿಂದ ನಾಯಕರ ಪ್ರಚೋದನೆ ಭಾಷಣಕ್ಕೆ ಬಲಿಯಾಗಬೇಡಿ ಎಂದು ಹೇಳಿದರು.
ನಂತರ ಮಾತನಾಡಿದ ಭರತ್ ಮುಂಡೋಡಿ, ಮುಖ್ಯಮಂತ್ರಿಗಳು ರಾಜ್ಯದ ಸರ್ವಜನರನ್ನು ಏಕಭಿಪ್ರಾಯದಲ್ಲಿ ನೋಡಬೇಕು. ಇತ್ತೀಚೆಗೆ ಎರಡು ಯುವಕರ ಮೇಲೆ ಕೋಮು ವಿಚಾರದಲ್ಲಿ ಹಲ್ಲೆಯಾಗಿದ್ದು ಇದಕ್ಕೆ ಮುಖ್ಯಮಂತ್ರಿ ಒಂದು ಕಡೆಗೆ ಮಾತ್ರ ಪರಿಹಾರ ಕೊಟ್ಟು ಇನ್ನೊಬ್ಬರಿಗೆ ಪರಿಹಾರ ಕೊಡದಿರುವುದು ಸಮಾಜಕ್ಕೆ ದುಃಖದ ಸಂಗತಿಯಾಗಿದೆ. ಸಮಾನ ಹಂಚಿಕೆ ಮಾಡಿ ರಾಜ್ಯ ಧರ್ಮವನ್ನು ಕಾಪಾಡಿ. ನಮಗೆ ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಇದೆ. ಹಾಗಾಗಿ ಮನವಿ ಮಾಡುವುದೆಂದರೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡುವಾಗ ಎಲ್ಲರಿಗೂ ಸಮಾನವಾಗಿ ಏಕಮಾತ್ರ ತೀರ್ಮಾನ ಮಾಡಬೇಕು. ಹಾಗೂ ಅಪರಾಧಿ ಶಫಿಕ್ 2 ವರ್ಷಗಳ ಹಿಂದೆ ಗುತ್ತಿಗಾರಿನ ಪ್ರಗತಿ ಅಡಿಕೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಇಂದು ಆತ ಅವರೊಂದಿಗೆ ಕೆಲಸಕ್ಕೆ ಬಾರದಿದ್ದರೂ ಅವರ ಅಂಗಡಿಯನ್ನು ಪುಡಿ ಪುಡಿ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಹಾಗೂ ಇಬ್ಬರು ಪೋಲೀಸರನ್ನು ಲಾಠಿಚಾರ್ಜ್ ರಿವೇಂಜ್ ಗೆ ವರ್ಗಾವಣೆ ಮಾಡಿದ್ದಾರೆ ಎಂದು ಸರ್ಕಾರ ಹೇಳಬೇಕು ಎಂದು ಮನವಿ ಮಾಡಿಕೊಂಡರು.
ಪಿ.ಸಿ ಜಯರಾಮ ಮಾತನಾಡಿ, ಮುಖ್ಯಮಂತ್ರಿ ತಾರತಮ್ಯ ಮಾಡಬಾರದು ಹಾಗೂ ಈ ರೀತಿ ಮಾಡಿದರೆ ಅವರ ಹುದ್ದೆಗೆ ಕಪ್ಪು ಚುಕ್ಕಿ. ಅದಲ್ಲದೆ ಗುತ್ತಿಗಾರಿನಲ್ಲಿ ಅಂಗಡಿ ಪುಡಿ ಮಾಡುವಂತೆ ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇಂತಹ ಕಾನೂನನ್ನು ಬಿಜೆಪಿ ಸರ್ಕಾರ ಕೈಗೆತ್ತಿಕೊಂಡಿರುವುದನ್ನು ಖಂಡಿಸುತ್ತೇವೆ ಎಂದರು. ನಂತರ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ಆ.3 ರಂದು 79 ವರ್ಷದ ಅಮೃತಾ ಮಹೋತ್ಸವದ ಅಂಗವಾಗಿ ಸುಳ್ಯದಿಂದ 100 ಕ್ಕಿಂತ ಹೆಚ್ಚು ಜನ ಹೋಗುತ್ತಿದ್ದೇವೆ . ಹಾಗೇಯೇ 75 ನೇ ವರ್ಷದ ಸ್ವಾಂತಂತ್ರೋತ್ಸವವನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಲಿದ್ದು, ಸುಳ್ಯದಲ್ಲಿ ಆ.9ರಂದು ಕಾಂಗ್ರೆಸ್ ನ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಅರಂತೋಡಿನಿಂದ ಸುಳ್ಯ ತನಕ ಜಾತ ನಡೆಯಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪಿ. ಎಸ್ ಗಂಗಾಧರ್, ಭವಾನಿ ಶಂಕರ, ಸಚಿನ್ ರಾಜ್ , ನಂದರಾಜ ಸಂಕೇಶ್ ಉಪಸ್ಥಿತರಿದ್ದರು.