
ಬೆಳ್ಳಾರೆಯಲ್ಲಿ ಪ್ರವೀಣ ನೆಟ್ಟಾರ್ ಅವರ ಕೊಲೆ ಪ್ರಕರಣದ ಆರೋಪಿ ಶಫೀಕ್ ಎಂಬವರು ಒಂದು ವರೆ ವರ್ಷಗಳ ಹಿಂದೆ ಗುತ್ತಿಗಾರಿನ ಪ್ರಗತಿ ಎಂಟ್ರಪ್ರೈಸಸ್ ನಲ್ಲಿ ಕೆಲಸಕ್ಕಿದ್ದು ಇದೀಗ ಮಂಗಳೂರಿನ ಗಾರ್ಬಲ್ ಸಂಸ್ಥೆಯ ಬೆಳ್ಳಾರೆ ಶಾಖೆಯಲ್ಲಿ ಕೆಲಸಕ್ಕೆ ಮಾಡುತ್ತಿದ್ದಾನೆ. ಶಫೀಕ್ ನಿಗೂ ಮತ್ತು ಸಂಸ್ಥೆಗೂ ಯಾವುದೇ ಸಂಬಂಧವಿರುದಿಲ್ಲ ಆದುದರಿಂದ ಯಾರೂ ಕೂಡ ತಪ್ಪು ಗ್ರಹಿಕೆ ಮಾಡಬಾರದಾಗಿಯೂ, ಪ್ರವೀಣ್ ಅವರ ಹತ್ಯೆಯನ್ನು ಖಂಡಿಸುವುದಲ್ಲದೆ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಸಂಸ್ಥೆಯ ಮಾಲಕರಾದ ಅಬ್ದುಲ್ ಖಾದರ್ ಹಾಜಿಯವರು ಅಮರ ಸುದ್ದಿಗೆ ತಿಳಿಸಿದ್ದಾರೆ.