ಬೆಳ್ಳಾರೆ ಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಎಂಬುವವರ ಭೀಕರ ಹತ್ಯೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಮೊನ್ನೆ ನಡೆದ ಮಸೂದ್ ಎಂಬ ಯುವಕನ ಹತ್ಯೆ, ನಿನ್ನೆ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಇಂತಹ ದುಷ್ಕೃತ್ಯಗಳನ್ನು ಜಾತಿ, ಮತ, ಪಕ್ಷಗಳನ್ನು ಮೀರಿ ಮನುಕುಲದ ಎಲ್ಲರೂ ಖಂಡಿಸುವುದು ಅನಿವಾರ್ಯವಾಗಿರುತ್ತದೆ. ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ ಆಗ್ರಹಿಸಿದ್ದಾರೆ. ಹಾಗೂ ಜನತೆ ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕಾಗಿ ವಿನಂತಿಸಿದ್ದಾರೆ.
- Wednesday
- April 2nd, 2025