ಸ್ವ ಉದ್ಯೋಗ ಮಾಡಲು ಸರಕಾರ ಸ್ವ ಸಹಾಯ ಸಂಘಗಳ ಮುಖಾಂತರ ಉತ್ತಮ ಅವಕಾಶ ನೀಡುತ್ತಿದೆ. ಮೀನುಗಾರಿಕೆ ಮುಖಾಂತರ ಉತ್ತಮ ಅವಕಾಶಗಳಿದೆ ಎಂದರು. ಸಹಕಾರ ಸಂಘಗಳಲ್ಲೂ ಸ್ವ ಉದ್ಯೋಗಕ್ಕೆ ಸಾಲ ನೀಡುವಂತಾಗಲೂ ಸರಕಾರ ಕಾನೂನು ರೂಪಿಸುತ್ತಿದೆ ಎಂದರು.
ಅವರು ಜು.24 ರಂದು ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸಹಕಾರಿ ಸಂಘವು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ದಿ. ಗೋಪಾಲಕೃಷ್ಣ ಗೌಡ ಕೇಪಳಕಜೆ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರ ಇದ್ದಾಗ ಗೌರವವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಆಗ ಸಮಾಜ ಕೂಡ ಗುರುತಿಸುತ್ತದೆ ಎಂದರು. ಮೀನುಗಾರಿಕೆ ಇಲಾಖೆ ಮುಖಾಂತರ ಬೋರ್ಡ್ ರಚನೆ ಮಾಡಿ 24 ಯೋಜನೆ ಜಾರಿಗೆ ತಂದಿದ್ದೇವೆ. ಮೀನುಗಾರಿಕಾ ಉದ್ಯಮವನ್ನು ವಿದೇಶಗಳ ಜೊತೆಗೆ ವ್ಯವಹಾರ ಆರಂಭಿಸಲು ಕೇಂದ್ರ ಸರಕಾರ ಕೂಡ ಅವಕಾಶ ನೀಡಿದೆ. ಪೌಷ್ಟಿಕಾಂಶ ವಿರುವ ಆಹಾರ ವಾಗಿರುವ ಮೀನು ಕೃಷಿ ಆರಂಭ ಮಾಡುವುದಕ್ಕೆ ಹೆಚ್ಚಿನ ಅವಕಾಶ ಸರಕಾರ ನೀಡಿದೆ ಎಂದರು.
ಸಭಾ ಕಾರ್ಯಕ್ರಮ ವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಹಕಾರ ರತ್ನ ಡಾ|| ಎ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿದರು. ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ನಿರ್ದೆಶಕ ಶಶಿಕುಮಾರ್ ಬಾಲ್ಯೋಟು, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಪ್ರವೀಣ್ ಬಿ. ನಾಯಕ್, ಸಹಕಾರ ಸಂಘಗಳ ಪುತ್ತೂರು ಉಪ ವಿಭಾಗದ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ., ತಾಲೂಕು ಸಹಕಾರ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಬೊಳ್ಳಾಜೆ, ಸ್ಥಳ ದಾನಿಗಳಾದ ಸೋಮಶೇಖರ ಕೇಪಳಕಜೆ ಉಪಸ್ಥಿತರಿದ್ದರು. ಸಂಘದ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರುಗಳು, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸ್ಥಳದಾನಿ, ವಿವಿಧ ಕ್ಷೇತ್ರದ ಸಾಧಕರನ್ನು, ಉತ್ತಮ ನವೋದಯ ಸಂಘಗಳನ್ನು ಸನ್ಮಾನಿಸಲಾಯಿತು. ಉಮೇಶ್ ಪ್ರಭು ಸ್ವಾಗತಿಸಿದರು. ಮುರಳೀಧರ ಪುನ್ಕುಟ್ಟಿ ಹಾಗೂ ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024