ಕಳೆದ 8 ತಿಂಗಳಿನಿಂದ ಅಂಗಾರರು 100 ಕೋಟಿ ಅನುದಾನ ತರಿಸಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ಇದೆಲ್ಲವನ್ನೂ ನೋಡಿದ ಕಾಂಗ್ರೆಸ್ ನವರಿಗೆ ರಾಜಕೀಯವಾಗಿ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರಷ್ಟೆ ಎಂದು ಬಿಜೆಪಿ ಮಂಡಲ ಸಮಿತಿ ಹೇಳಿದೆ.
ಸಚಿವರಾದ ಎಸ್.ಅಂಗಾರರ ಸುಳ್ಯ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನಗಳ ಮಹಾಪೂರವೇ ಬರಲು ಆರಂಭಿಸಿದೆ. ವಿವಿಧ ಯೋಜನೆಯಡಿಯಲ್ಲಿ ಕಳೆದ 8 ತಿಂಗಳಿಂದ ಸುಮಾರು 100 ಕೋಟಿ ರೂಪಾಯಿಯ ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೂಡಾ ರೂ. 50,00 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಅದಲ್ಲದೆ ವಿವಿಧ ಇಲಾಖೆಗಳಿಂದ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗಾಗಿ ಸಚಿವರ ಶಿಫಾರಸ್ಸಿನ ಮೇರೆಗೆ ಬಹಳಷ್ಟು ಅನುದಾನಗಳು ಬಿಡುಗಡೆ ಹಂತದಲ್ಲಿರುತ್ತದೆ. ಸಚಿವರು ಸುಳ್ಯ ಕ್ಷೇತ್ರದಾದ್ಯಂತ ಎಲ್ಲಾ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ದಾಖಲೆ ಮಟ್ಟದಲ್ಲಿ ವೈಯಕ್ತಿಕ ಯೋಜನೆಗಳನ್ನು, ಅರ್ಹ ಫಲಾನುಭವಿಗಳಿಗೆ ರಾಜಕೀಯ ರಹಿತವಾಗಿ ಹಾಗೂ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದ ರೀತಿಯಲ್ಲಿ ಒದಗಿಸಿಕೊಡುತ್ತಿದ್ದಾರೆ.
ಸುಳ್ಯದ ಜನರ ಬಹು ಕಾಲದ ಬೇಡಿಕೆಯಾಗಿರುವ 110 ಕೆ.ವಿ. ವಿದ್ಯುತ್ ಲೈನ್ ಸಂಪರ್ಕಕ್ಕೆ ಇದ್ದ ಎಲ್ಲಾ ಕಾನೂನಾತ್ಮಕ ಹಾಗೂ ತಾಂತ್ರಿಕ ಅಡಚಣೆಗಳನ್ನು ನಿವಾರಿಸುವಲ್ಲಿ ಸಚಿವ ಎಸ್.ಅಂಗಾರರು ಮತ್ತು ಇದಕ್ಕೆ ವಿಶೇಷ ಮುತುವರ್ಜಿ ವಹಿಸಿದ ಇಂಧನ ಸಚಿವ ವಿ.ಸುನಿಲ್ ಕುಮಾರವರಿಗೆ ಯಶಸ್ಸು ಕಂಡಿದ್ದಾರೆ.ಸಚಿವರ ಅಭಿವೃದ್ಧಿ ಕಾರ್ಯಗಳ ಜನಪ್ರಿಯತೆಯಿಂದ ಶಾಶ್ವತವಾಗಿ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಿಂದಸುಳ್ಯದ ಕಾಂಗ್ರೆಸಿಗರು ಕಂಗೆಟ್ಟಿದ್ದಾರೆ. ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಆಗಾಗ ಪತ್ರಿಕಾಗೋಷ್ಠಿಯನ್ನು ನಡೆಸುವಕಾರ್ಯಕ್ಕೆ ಕಾಂಗ್ರೆಸ್ ನಾಯಕರು ತೊಡಗಿದ್ದಾರೆ. ಇದು ಸುಳ್ಯದಲ್ಲಿ ಕಾಂಗ್ರೆಸ್‌ನ ದಯನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
1994ರಿಂದ ಬಿ.ಜೆ.ಪಿ.ಯ ಎಸ್.ಅಂಗಾರರು ಶಾಸಕರಾದ ಮೇಲೆ ಕ್ಷೇತ್ರದಾದ್ಯಂತ ಗಣನೀಯವಾಗಿ ರಸ್ತೆ ಅಭಿವೃದ್ಧಿ ಮತ್ತು ದಾಖಲೆ ಸಂಖ್ಯೆಯಲ್ಲಿ ಸೇತುವೆಗಳ ನಿರ್ಮಾಣವಾಗಿರುವಂತದ್ದು ಸಾರ್ವಕಾಲಿಕ ಸತ್ಯ 1994ರ ಹಿಂದೆ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿಯ ಚಿಂತನೆ ಮತ್ತು ಯೋಜನೆಗಳು ಕಾರ್ಯಗತಗೊಳ್ಳದೆ ಇದ್ದದ್ದು ಕೂಡಾ ಅಷ್ಟೇ ಸತ್ಯ. ಕಾಂಗ್ರೆಸ್‌ನವರು ಓಟಿಗಾಗಿ ಕೋಮುವಾದಿಗಳ ಓಲೈಕೆ ಮಾಡುವುದರಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ ಭಾರತೀಯ ಜನತಾ ಪಾರ್ಟಿಯು ರಾಷ್ಟ್ರೀಯತೆ ಮತ್ತು ಹಿಂದುತ್ವದ ವಿಚಾರದ ಅಡಿಯಲ್ಲಿ ರಾಜಕಾರಣ ಮಾಡುತ್ತಿದ್ದು, ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದು, ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್‌ರವರ ಹೇಳಿಕೆಯ ಪ್ರಕಾರ ಕಾಂಗ್ರೆಸ್ ನವರಿಗೆ ರಾಜಕಾರಣ ಎನ್ನುವುದು ರಾಷ್ಟ್ರ ಹಿತದ ಬದಲಾಗಿ, ಅವರವರ ನಾಲ್ಕಾರು ತಲೆಮಾರುಗಳಿಗೆ ಬೇಕಾಗುವಷ್ಟು ಸಂಪಾದನೆ ಮಾಡಿಕೊಳ್ಳಲು ಇರುವ ಒಂದು ವ್ಯವಸ್ಥೆಯಾಗಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಬಿ.ಜೆ.ಪಿ, ಸರಕಾರವು ದೇಶದ ಘನತೆ, ಗೌರವವನ್ನು ಹೆಚ್ಚಿಸುವುದರ ಜೊತೆಗೆ, ಹಿಂದೆಂದೂ ಕಾಣದ ಅಭಿವೃದ್ಧಿಯ ಕಾರ್ಯಗಳನ್ನು ನಡೆಸುತ್ತಿದೆ. ಮುಂದಿನ ಹಲವು ದಶಕಗಳ ಕಾಲ ಬಿ.ಜೆ.ಪಿ. ನೇತೃತ್ವದಲ್ಲಿ ರಾಷ್ಟ್ರದ ಅಭಿವೃದ್ಧಿ ಕಾರ್ಯ ನಡೆಯುವಂತೆ, ಸುಳ್ಯ ಕ್ಷೇತ್ರದಲ್ಲಿ ಕೂಡಾ ಅಭಿವೃದ್ಧಿ ಬಿ.ಜೆ.ಪಿ.ಯವರಿಂದಲೇ ಆಗಲಿದೆ ಎಂದುಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಗಳಾದ ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.