Ad Widget

ಸುಳ್ಯದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ವೈದ್ಯರ ದಿನಾಚರಣೆ

ಸುಳ್ಯ: ಸದರ್ನ್ ರೆಸಿಡೆನ್ಸಿಯ ಸಂಭ್ರಮ ಸಭಾಂಗಣದಲ್ಲಿ ಸುಳ್ಯದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ವೈದ್ಯರ ದಿನಾಚರಣೆಯನ್ನು ಜು.16 ರಂದು ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಐ.ಎಂ.ಎ. ಅಧ್ಯಕ್ಷೆ ಡಾ.ವೀಣಾ ಸಭಾಧ್ಯಕ್ಷತೆ ವಹಿಸಿದ್ದರು. ಖ್ಯಾತ ಶಸ್ತ್ರಚಿಕಿತ್ಸಕ ಡಾ|ಭಾಸ್ಕರಾನಂದ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಜೀವನ ಪಯಣದ ಅನುಭವಗಳನ್ನು ವಿವರಿಸಿದರು.

ಎಂ ಎ ಸುಳ್ಯದ ಸ್ಥಾಪಕ ಅಧ್ಯಕ್ಷರಾದ ಡಾ. ಕೆ.ವಿ.ಚಿದಾನಂದರು ಹಾಗೂ ಮಡಿಕೇರಿ ಮಕ್ಕಳ ತಜ್ಞ ಮೇಜರ್ ಡಾ.ಕುಶ್ವ ಕೋಳಿಬೈಲ್ ವಿಶೇಷ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರುಗಳಾದ ಜ್ಯೋತಿ ಆಸ್ಪತ್ರೆಯ ಡಾ. ಸದಾಶಿವ ರಾವ್, ಡಾ. ರಘುರಾಮ್ ಎಂ.ಕೆ., ತಾಲ್ಲೂಕು ಆಸ್ಪತ್ರೆಯ ಶುಶ್ರೂಧಿಕಾರಿ ಶ್ರೀಮತಿ ಜಯಮಾಲ ಕೆ., ಕ್ಷೇತ್ರ ಸಂಪನ್ಮೂಲ ಸಮನ್ವಯ ಕೇಂದ್ರದ ಶಿಕ್ಷಕರಾದ ಸುಬ್ರಹ್ಮಣ್ಯ ಎನ್.ಸಿ., ಸುಳ್ಯ ಎ.ಎಸ್ .ಐ.ರವೀಂದ್ರ ಹೆಚ್.ಆರ್ ಅವರನ್ನು ಸನ್ಮಾನಿಸಲಾಯಿತು. ಡಾ.ಕರುಣಾಕರ ಕೆ.ವಿ. ಸ್ವಾಗತಿಸಿ, ಕಾರ್ಯದರ್ಶಿ ಡಾ.ರವಿಕಾಂತ್ ಜಿ.ಒ. ವರದಿ ಮಂಡಿಸಿ, ವಂದಿಸಿದರು. ಕಾರ್ಯಕ್ರಮವನ್ನು ಡಾ.ಅಮಿತ್ ಕುಮಾರ್ ಹಾಗೂ ಡಾ.ರಜನಿ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!