ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ರೈತ ಹಿತರಕ್ಷಣಾ ವೇದಿಕೆ ಕೊಲ್ಲಮೊಗ್ರು ಇವರ ಸಹಯೋಗದಲ್ಲಿ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯ ವಿರುದ್ಧ ಜು.23ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಯಿತು.
ಗೋಷ್ಠಿಯಲ್ಲಿ ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್. ಕೆ.ಎಲ್ ಮಾತನಾಡಿ, ಹೆಚ್ ಎಲ್ ಡಬ್ಲ್ಯೂಜಿ ಸಮಿತಿ ನಿರ್ಮಾಣ ಕೇಂದ್ರ ಸಹಕಾರದಿಂದ ಹಸಿರು ಪೀಠದ ಆದೇಶದಂತೆ ಆ ಪ್ರಕಾರ ಮಾದವ್ ಗಾಡಿಗಿಲ್ ವರದಿಯ ಆರು ರಾಜ್ಯಗಳ ಜನ ಸಮೂಹಕ್ಕೆ ಮಾರಕವಾಗಿದೆ ಅದಲ್ಲದೆ ಆರು ರಾಜ್ಯದ 4156 ಗ್ರಾಮಗಳು ಸೇರ್ಪಡೆಯುವಿಕೆ ಅಷ್ಟು ಕಂದಾಯ ಕಾಡಿನಂಚಿನ ಗ್ರಾಮಗಳ ಕೇವಲ ಉಪಗ್ರಹ ಆಧಾರಿತ ವಾಗಿ ಅವೈಜ್ಞಾನಿಕ ಮಾಡಿರುತ್ತಾರೆ.
ಆದ್ದರಿಂದ ಕೇಂದ್ರ ಪರಿಸರ ಮಂತ್ರಾಲಯ 4ನೇ ಭಾರಿಗೆ ಅವೈಜ್ಞಾನಿಕವಾಗಿ ಗುಜರಾತಿನ ತಪಾತಿ ನದಿಯಿಂದ ಕನ್ಯಾಕುಮಾರಿ ತನಕ ಸಾಂಸ್ಕೃತಿಕ ವಲಯವನ್ನು ಅರಣ್ಯದೊಂದಿಗೆ ಜೋಡಿಸಿ ಕಸ್ತೂರಿ ರಂಗನ್ ವರದಿ ಆಧರಿಸಿ ಪ್ರಾಣಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಕಾನೂನಿಗೆ ಪರಿಸರ ಮಂತ್ರಾಲಯ ಒಪ್ಪಿಗೆ ಸೂಚಿಸಿರುವುದು ಕಾನೂನು ಬಾಹಿರ ನಡವಳಿಕೆಯಾಗಿದೆ.ಬ್ರಿಟಿಷರ ಮೂಲ ಸೆಟ್ಲ್ ಮೆಂಟ್ ಕಾಯ್ದೆ 1908 ಪ್ರಕಾರ ಬ್ರಿಟಿಷರ ಎಫ್ ಎಂ ಸಿ ನಕ್ಷೆಗಳ ಆಧಾರಿತ ಅದೇ ಮಾದರಿಯಲ್ಲಿ ಪರಿಸರ ಸಂರಕ್ಷಣೆ ಪುನರ್ ಊರ್ಜಿತಗೊಳಿಸಬೇಕು.
ಹಿಂದೆ ಪರಿಸರ ಸಂರಕ್ಷಣಾ ಸಭೆಯಲ್ಲಿ 2010 ರಿಂದ 2020 ತನಕ ವಿರೋಧಿಸದೆ ಹಾಗೂ ಹಸಿರು ಪೀಠದಲ್ಲಿ ವೈಜ್ಞಾನಿಕ ಕಾನೂನು ಹೋರಾಟ ಮಾಡಲು ಕೇವಲ ಅಧಿಕಾರದಲ್ಲಿ ಇದ್ದರೂ ಇವತ್ತಿನ ತನಕ ಜನರನ್ನು ಎಲ್ಲಾ ಪಕ್ಷಗಳು ಸತ್ಯಾಂಶದಿಂದ ದೂರವಿಟ್ಟಿರುತ್ತಾರೆ. ಕಸ್ತೂರಿ ರಂಗನ್ ವರದಿಯಲ್ಲಿ ಗಡಿ ಗುರುತು ವೈಮಾನಿಕ 10 ಕಿ.ಮಿ ಇರುವುದು ಅದು 0-100 ಮೀಟರ್ ರೇಡಿಯಸ್ ನಲ್ಲಿ ಇರಬೇಕು.ಅಲ್ಲದೆ ಪ್ರತಿ ಕಾಡಿನಂಚಿನ ಗ್ರಾಮದ ಹಸಿರು ವಲಯ ಮತ್ತು ಸಾಂಸ್ಕೃತಿಕ ವಲಯವಾಗಿ ವಿಂಗಡಿಸಿ ಪ್ರತಿ ಸರ್ವೇ ನಂಬರಿನ ಪ್ರಕಾರ ಮಾಡತಕ್ಕದ್ದು ಹಾಗೂ ಅದನ್ನು ಪರಿಶೀಲಿಸಿ ಅದರ ವರದಿಯನ್ನು ಹಸಿರು ಪೀಠದಲ್ಲಿ ಹಾಗೂ ಕೇಂದ್ರಕ್ಕೆ ದಾಖಲೆ ಕಳುಹಿಸಬೇಕು.
ಜನಸಾಮಾನ್ಯರು ಪಂಚಾಯತ್ ಜನ ಪ್ರತಿನಿಧಿ ಮುಖಾಂತರ ಹಕ್ಕೋತ್ತಾಯ ನಿರ್ಣಯ ತೆಗೆದುಕೊಳ್ಳುವುದು ಹಾಗೂ ಕಾನೂನಾತ್ಮಕವಾಗಿ ಒತ್ತಡ ಹಾಕಬೇಕು. ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಜನರು ಕೂಡಲೆ ಎಚ್ಚೆತ್ತುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಕೊಲ್ಲಮೊಗ್ರದ ರೈತ ಹಿತ ರಕ್ಷಣಾ ವೇದಿಕೆಯ ಹಮೀದ್ ಇಡ್ನೂರ್, ಸಾಮಾಜಿಕ ಹೋರಾಟಗಾರ ಚಂದ್ರಶೇಖರ ಕೋನಡ್ಕ, ಸದಸ್ಯ ಮಹಾಲಿಂಗೇಶ್ವರ ಶರ್ಮಾ ಉಪಸ್ಥಿತರಿದ್ದರು.