ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ದೀನ್ ದಯಾಳ್ ರೈತ ಸಭಾಭವನವನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇಂದು ಲೋಕಾರ್ಪಣೆಗೊಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ವಹಿಸಿದ್ದರು. ಗೊಬ್ಬರ ದಾಸ್ತಾನು ಮಳಿಗೆ ಹಾಗೂ ಭೋಜನ ಶಾಲೆ ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಕ್ಯಾಂಪೋ ರಬ್ಬರ್ ಮತ್ತು ಕಾಳುಮೆಣಸು ಖರೀದಿ ಕೇಂದ್ರದ ಉದ್ಘಾಟನೆಯನ್ನು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಿದರು. ಮೀನುಗಾರಿಕೆ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಸಭಾಕಾರ್ಯಕ್ರಮದ ದೀಪ ಬೆಳಗಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ ಅಚಳ್ಳಿ, ಗುತ್ತಿಗಾರು ಪ್ರಾ.ಕೃ.ಸ.ಸಂಘ ಮಾಜಿ ಅಧ್ಯಕ್ಷ ಮುಳಿಯ ತಿಮ್ಮಪ್ಪಯ್ಯ, ಮಾಜಿ ನಿರ್ದೇಶಕ ಭರತ್ ಮುಂಡೋಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೋಟು, ಗುತ್ತಿಗಾರು ಸಹಕಾರಿ ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರಾದ ಬಿ.ಕೆ.ಬೆಳ್ಯಪ್ಪ ಗೌಡ, ಎ.ವಿ.ತೀರ್ಥರಾಮ, ಮುಳಿಯ ಕೇಶವ ಭಟ್, ರವಿಪ್ರಕಾಶ್ ಬಳ್ಳಡ್ಕ, ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಮೊಗ್ರ, ನವೀನ್ ಬಾಳುಗೋಡು, ಮಂಜುಳಾ ಮುತ್ಲಾಜೆ, ಚಂದ್ರಾವತಿ ಮುಂಡೋಡಿ, ಕುಂಞ ಬಳ್ಳಕ್ಕ, ಆನಂದ ಹಲಸಿನಡ್ಕ ಉಪಸ್ಥಿತರಿದ್ದರು. ಎ.ವಿ.ತೀರ್ಥರಾಮ ಸ್ವಾಗತಿಸಿದರು. ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿಶೋರ್ ಕುಮಾರ್ ಪೈಕ, ಶಶಿಧರ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಂಘದ ಬೆಳವಣಿಗೆಗೆ ಶ್ರಮಿಸಿದ ಮಾಜಿ ಅಧ್ಯಕ್ಷರಾದ ಮುಳಿಯ ತಿಮ್ಮಪ್ಪಯ್ಯ, ಭರತ್ ಮುಂಡೋಡಿ, ಮುಳಿಯ ಕೇಶವ ಭಟ್, ಎ.ವಿ.ತೀರ್ಥರಾಮ ಅಂಬೆಕಲ್ಲು, ಬಿ.ಕೆ.ಬೆಳ್ಯಪ್ಪ ಗೌಡರನ್ನು ಗೌರವಿಸಲಾಯಿತು.