ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ಸಂಚಾಲಕರಾದ ಶ್ರೀ ಕೆ ಆರ್.ಗಂಗಾಧರ್ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಪಡೆಯಬೇಕಾದರೆ ನಿರಂತರ ಅಧ್ಯಯನವೇ ಪ್ರಮುಖವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು. ಕಾಲೇಜಿನ ವಿದ್ಯಾರ್ಥಿ ಸರ್ಕಾರದ ನಾಯಕನಾಗಿ ದ್ವಿತೀಯ ಕಲಾ ವಿಭಾಗದ ಪುನೀತ್ .ಕೆ.ಎಸ್ , ಉಪ ನಾಯಕಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಕುಮಾರಿ ಮೂವಿತ ಬಿ.ವಿ, ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿಯಾಗಿ ಅನ್ವಿತಾ ಹತ್ತನೇ ತರಗತಿ, ಉಪ ನಾಯಕಿಯಾಗಿ ದೀಪ್ತಿ ಕೆ.ಸಿ ಒಂಬತ್ತನೇ ತರಗತಿ ಹಾಗೂ ಮಂತ್ರಿಮಂಡಲದ ಸದಸ್ಯರೆಲ್ಲರಿಗೆ ರಾಜ್ಯಪಾಲರಾಗಿ ಕಾಲೇಜಿನ ಪ್ರಾಂಶುಪಾಲರು ರಮೇಶ್.ಎಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸೀತಾರಾಮ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ಇತಿಹಾಸ ಉಪನ್ಯಾಸಕರಾದ ಮೋಹನಚಂದ್ರ ಧನ್ಯವಾದ ಸಲ್ಲಿಸಿದರು, ಚುನಾವಣಾಧಿಕಾರಿಯಾದ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ.ಜಿ.ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಿಶೋರ್ ಕುಮಾರ್ ಕಿರ್ಲಾಯ ನಿರೂಪಿಸಿದರು. ಉಪನ್ಯಾಸಕರು,ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
- Thursday
- November 21st, 2024