ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಸಂಬಂಧಿಸಿದ ಸಾಲಗಳ ಕಂತು ಮರುಪಾವತಿಗೆ ಈ ಆರ್ಥಿಕ ವರ್ಷ ವಿನಾಯಿತಿ ನೀಡಬೇಕೆಂದು ನಿರ್ಣಯಿಸಲಾಗಿದೆ. ಈ ಬಗ್ಗೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದೆಂದೂ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಪವಿತ್ರ ಬಿ. ವಹಿಸಿದ್ದರು.
ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಸದಸ್ಯ ಚಿತ್ತರಂಜನ್ ಕೋಡಿ ವಿಷಯ ಪ್ರಸ್ತಾಪಿಸಿದರು. ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದಾಗಿ ಮರ್ಕಂಜ ಗ್ರಾಮದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟಗಳಿಗೆ ಹಳದಿ ರೋಗ ಭಾಧಿತ ಪ್ರದೇಶವಾಗಿರುವುದರ ಜತೆಗೆ ಮಳೆಯಿಂದಾಗಿ ಅಡಿಕೆ ಹಾಗೂ ಕೊಕ್ಕೋ ಕೃಷಿಗೆ ರೋಗ ಬಾಧಿಸಿದೆ. ಕೃಷಿ ಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ. ಆದ್ದರಿಂದ ಪ್ರಾಕೃತಿಕ ವಿಕೋಪಕ್ಕೆ ಬಾಧಿತ ಗ್ರಾಮಸ್ಥರ ಸಾಲದ ಕಂತು ಮರುಪಾವತಿಗೆ ವಿನಾಯಿತಿ ನೀಡುವಂತಾಗಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಸರ್ವ ಸದಸ್ಯರ ಒಪ್ಪಿಗೆ ಪಡೆದು ನಿರ್ಣಯ ಕೈಗೊಂಡರು. ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಗೋವಿಂದ ಅಳವುಪಾರೆ ಹಾಗೂ ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು. ಪಿಡಿಓ ರವಿಚಂದ್ರ ಸ್ವಾಗತಿಸಿ, ವಂದಿಸಿದರು.
- Thursday
- November 21st, 2024