ಹಲವು ವರ್ಷಗಳಿಂದ ತಾವು ಬೆಳೆಸಿದ ಕೃಷಿ ತುಂಬಿ ಹರಿಯುತ್ತಿರುವ ನದಿ ಪಾಲಾಗುತ್ತಿದ್ದು ಅಡಿಕೆ ಮರ,ತೆಂಗಿನ ಮರ ,ಹಲಸಿನ ಮರ ಕೊಚ್ಚಿ ಹೋಗುತ್ತಿದೆ. ಸಂಪೂರ್ಣ ಕೃಷಿ ಭೂಮಿ ನದಿ ಪಾಲು ಆಗುತ್ತಿದೆ . ಇದು ಕೊಲ್ಲಮೊಗ್ರ ಚಾಳೆಪ್ಪಾಡಿ ದೋಲನ ಮನೆ ಎಂಬಲ್ಲಿನ ಅನೇಕ ಕೃಷಿಕರ ನೋವಿಗೆ ಕಾರಣವಾಗಿದೆ.2018 ನೇ ಇಸವಿಯಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ಕಲ್ಮಕಾರು ಬೆಟ್ಟದಲ್ಲಿ ಮಣ್ಣು ಕುಸಿತ ಗೊಂಡು ಭಾರಿ ಗಾತ್ರದ ಮರಗಳು ನದಿಯಲ್ಲಿ ಕೊಚ್ಚಿ ಬಂದು ಅನೇಕ ಕಡೆಗಳಲ್ಲಿ ರಾಶಿ ನಿಂತ ಪರಿಣಾಮವಾಗಿ ನದಿ ಕೆಲವು ಕಡೆ ದಿಕ್ಕು ಬದಲಿಸಿ ಕೃಷಿ ಭೂಮಿಗಳಲ್ಲಿ ಹರಿಯಲಾರಂಭಿಸಿತು. ಇಂತಹ ಪ್ರಕೃತಿ ವಿಕೋಪಕ್ಕೆ ಕೊಲ್ಲಮೊಗ್ರ ದೋಲನ ಮನೆ ಎಂಬಲ್ಲಿ ಹೊಳೆ ಕೃಷಿ ಭೂಮಿ ಬಲಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಮಳೆಗಾಲ ಕೃಷಿ ಭೂಮಿಯನ್ನು ಕೊರೆಯುತ್ತಿದ್ದು ಇದೀಗ ಇಡೀ ಕೃಷಿ ಭೂಮಿಯೇ ಹೊಳೆ ಪಾಲಾಗುತ್ತಿದೆ.ಈ ಕುರಿತು ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಮನವಿ ಸಲ್ಲಿಸಿದ್ದಾರೆ.ಕೊಲ್ಲಮೊಗ್ರದಲ್ಲಿ ನಡೆದ ಕಂದಾಯ ಇಲಾಖೆ ಗ್ರಾಮ ವಾಸ್ತವ್ಯದಲ್ಲಿ ಈ ಕುರಿತು ಸಂಕಷ್ಟದಲ್ಲಿ ಸಿಲುಕಿರುವ ಕೃಷಿಕರು ಮನವಿ ಸಲ್ಲಿಸಿದ್ದರು. ಆದರೆ ಈವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ಇದು ಇನ್ನಷ್ಟು ಕೊರೆತ ಮುಂದುವರಿದಿದ್ದು ಗ್ರಾಮ ಪಂಚಾಯತ್ ನವರು,ಕಂದಾಯ ಇಲಾಖೆಯವರು , ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಪ್ರಕೃತಿ ವಿಕೋಪದಿಂದ ಉಂಟಾದ ಈ ಸಮಸ್ಯೆಗೆ ತಕ್ಷಣವಾಗಿ ಶಾಶ್ವತ ತಡೆಗೋಡೆಗೆ ಅಥವಾ ಪರಿಹಾರ ಒದಗಿಸಿ ಕೊಡಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
- Thursday
- November 21st, 2024