ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಮಡಿಕೇರಿ ಡಿಸಿ ಕಛೇರಿ ಬಳಿ ತಡೆಗೋಡೆ ಕುಸಿತದ ಭೀತಿಯಿಂದ ಪರ್ಯಾಯವಾಗಿ ತಾಳತ್ತನಮನೆ ರಸ್ತೆ ಬಳಸಲು ಸೂಚನೆ ನೀಡಲಾಗಿತ್ತು. ಇದೀಗ ಆ ರಸ್ತೆಯಲ್ಲಿ ಕೂಡ ಭೂಕುಸಿದ ಸಾಧ್ಯತೆ ಹಿನ್ನೆಲೆಯಲ್ಲಿ ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ. ಎರಡನೇ ಮೊಣ್ಣಂಗೇರಿ ರಾಮಕೊಲ್ಲಿ ಬಳಿ ಜಲಸ್ಪೋಟ ಉಂಟಾಗಿದ್ದು ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿದೆ.
ಈ ಎಲ್ಲಾ ಕಾರಣಗಳಿಂದ ಸಂಜೆ ವೇಳೆಗೆ ಸಂಪಾಜೆ ಗೇಟ್ ನಲ್ಲೂ ಘನ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಮಂಗಳೂರಿನಿಂದ ಮಡಿಕೇರಿ ಮೂಲಕ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತಿತರ ಸ್ಥಳಗಳಿಗೆ ಹೊರಟ ಎಲ್ಲ ಪ್ರಯಾಣಿಕರು ಇದೀಗ ಸಂಪಾಜೆಯ ಗೇಟ್ ಬಳಿ ನಿಲ್ಲುವಂತಾಗಿದೆ. ಇದರಿಂದಾಗಿ ಸಂಪಾಜೆ ಗೇಟ್ ಬಳಿ ಟ್ರಾಪಿಕ್ ಜಾಮ್ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.